ಬಾಗೇಪಲ್ಲಿ : ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಪ್ರತಿನಿತ್ಯ ತಮ್ಮ ತಮ್ಮ ಮನೆ ಮಠಗಳನ್ನು ಬಿಟ್ಟು ಜನರ ಆರೋಗ್ಯ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಆ್ಯರನ್ ಮಿರ್ಜಾ ತಿಳಿಸಿದರು.
ವೈದ್ಯರು ಹಾಗೂ ಆರೋಗ್ಯ ಅಧಿಕಾರಿಗಳ ಸೇವೆ ಶ್ಲಾಫನೀಯ: ಆ್ಯರನ್ ಮಿರ್ಜಾ - ಕೊರೊನಾ ಲಾಕ್ಡೌನ್
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ರೋಗಿಗಳಿಗೆ ಉಪಹಾರ ವಿತರಿಸಿ ಮಾತನಾಡಿದ ಅವರು, ನಮಗೆ ಕಾಣುವ ದೇವರೆ ವೈದ್ಯರು. ವೈದ್ಯರನ್ನು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಗೌರವದಿಂದ ಕಾಣಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಆ್ಯರನ್ ಮಿರ್ಜಾ ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ರೋಗಿಗಳಿಗೆ ಉಪಹಾರ ವಿತರಿಸಿ ಮಾತನಾಡುತ್ತಾ, ನಮಗೆ ಕಾಣುವ ದೇವರೆ ವೈದ್ಯರು. ವೈದ್ಯರನ್ನು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಗೌರವದಿಂದ ಕಾಣಬೇಕು. ತಮ್ಮ ಆರೋಗ್ಯವನ್ನೂ ಸಹ ಲೆಕ್ಕಿಸದೆ ಹಗಲು - ರಾತ್ರಿ ಜನರನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ. ಜನರೂ ಸಹ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮ ಮನೆಗಳ ಬಳಿ ಬಂದಾಗ ಸೌಜನ್ಯದಿಂದ ವರ್ತಿಸಿ ಅವರಿಗೆ ಬೇಕಾದ ಮಾಹಿತಿಯನ್ನು ನೀಡಿ ಗೌರವಿಸಿ ಎಂದು ಸೂಚಿಸಿದರು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಹಾಗೂ ಶಾಶ್ವತವಾಗಿ ಮಧುಮೇಹ, ರಕ್ತದೊತ್ತಡ ಇರುವ ಜನರಿಗೆ ಕೊರೊನಾ ವೈರಸ್ ಆತಂಕಕಾರಿಯಾದುದರಿಂದ ಜನರು ಎಚ್ಚರದಿಂದಿರಿ. ಆದರೆ ಭಯಪಡುವ ಅವಶ್ಯಕತೆ ಇಲ್ಲ. ಲಾಕ್ಡೌನ್ ಅನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಯಾರೂ ಮನೆಗಳಿಂದ ಹೊರಬರಬಾರದು. ಮನೆಗಳಲ್ಲಿಯೇ ಇರುವುದರಿಂದ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಜಾಗೃತಿ ಮೂಡಿಸಿದರು.