ಬಾಗೇಪಲ್ಲಿ (ಚಿಕ್ಕಬಳ್ಳಾಪುರ):ಬಾಗೇಪಲ್ಲಿ ಪಟ್ಟಣದ 4ನೇ ವಾರ್ಡ್ನ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು.
ಬಾಗೇಪಲ್ಲಿ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ.. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ - Chikkaballapur news
ಬಾಗೇಪಲ್ಲಿ ಪಟ್ಟಣದ 4ನೇ ವಾರ್ಡ್ನ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು.
![ಬಾಗೇಪಲ್ಲಿ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ.. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ District Collector visits the Baghepalli Seal Down area](https://etvbharatimages.akamaized.net/etvbharat/prod-images/768-512-8162129-283-8162129-1595611564308.jpg)
ಬಾಗೇಪಲ್ಲಿ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ..ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು
ಪಟ್ಟಣದ ಕೊರೊನಾ ನಿರ್ಮೂಲನ ಬೂತ್ ಮಟ್ಟದ ಸಮಿತಿ ತಂಡದ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿದರು. ಬಳಿಕ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಚರ್ಚಿಸಿ, ಕೊರೊನಾ ವಿರುದ್ದ ಹೋರಾಡಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ತಿಳಿಸಿದರು.
ನಂತರ ಪಟ್ಟಣದ 4ನೇ ವಾರ್ಡ್ನ ಮನೆ-ಮನೆಗೂ ತೆರಳಿ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯವರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
Last Updated : Jul 25, 2020, 11:46 AM IST