ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಡಿಸಿ ವರ್ಗಾವಣೆಗೆ ಖಂಡಿಸಿ ಕರೆ ನೀಡಿದ ಬಂದ್ ವಿಫಲ - ಜಿಲ್ಲಾಧಿಕಾರಿ ಅನಿರುದ್ಧ್​ ಶ್ರವಣ್​

ಜಿಲ್ಲೆಗೆ ಕಳೆದ ವರ್ಷ ಹೊಸದಾಗಿ ನಿಯೋಜನೆಗೊಂಡಿದ್ದ ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಅವರನ್ನು ಸರ್ಕಾರ ಮತ್ತೆ ವರ್ಗಾವಣೆ ಮಾಡಿದ್ದು, ಇದನ್ನು ಖಂಡಿಸಿ ರೈತಪರ ಮತ್ತು ಕನ್ನಡ ಪರ ಸಂಘಟನಗೆಳು ಜಿಲ್ಲಾ ಕೇಂದ್ರ ಬಂದ್​ಗೆ ಕರೆ ನೀಡಿದ್ದವು ಆದರೆ ಆ ಬಂದ್​ ವಿಫಲವಾಗಿದೆ.

Chikkaballapur

By

Published : Aug 17, 2019, 3:05 AM IST

ಚಿಕ್ಕಬಳ್ಳಾಪುರ:ಜಿಲ್ಲಾಧಿಕಾರಿ ಅನಿರುದ್ಧ್​ ಶ್ರವಣ್ ವರ್ಗಾವಣೆಯನ್ನು ಖಂಡಿಸಿ ರೈತಪರ ಮತ್ತು ಕನ್ನಡ ಪರ ಸಂಘಟನಗೆಳು ಕರೆ ನೀಡಿದ್ದ ಜಿಲ್ಲಾ ಕೇಂದ್ರ ಬಂದ್ ವಿಫಲವಾಗಿದೆ.

ಜಿಲ್ಲಾಧಿಕಾರಿಗಳ ವರ್ಗಾವಣೆ ಖಂಡಿಸಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

ಬೆಳ್ಳಂಬೆಳಗ್ಗೆ ಬಂದ್ ಆಚರಿಸಲು ರಸ್ತೆಗಿಳಿದ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವರ್ಗಾವಣೆಯಾಗಿ ಬಂದ ಒಂದು ವರ್ಷದಲ್ಲಿಯೇ ಮತ್ತೆ ಬೇರೆಡೆಗೆ ವರ್ಗಾಯಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚಿಗೆ ರೈತರು ಮತ್ತು ನಾಗರಿಕರು ಹೆದ್ದಾರಿ ತಡೆದು ಪ್ರತಿಭಟನೆಯನ್ನೂ ಕೂಡ ನಡೆಸಿದ್ದರು.

ABOUT THE AUTHOR

...view details