ಬಾಗೇಪಲ್ಲಿ:ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೂಲಿನ್ ಏರೋಸ್ಪೇಸ್, ಯುನೈಟೆಡ್ ವೇ ಹಾಗೂ ಹೆಲ್ಪಿಂಗ್ ಹ್ಯಾಂಡ್ ಬೆಂಗಳೂರು ಸಂಸ್ಥೆಯಿಂದ ಸುಮಾರು 13 ಲಕ್ಷ ರೂ. ಮೌಲ್ಯದ ಸುರಕ್ಷತಾ ಸಾಧನ ಹೆಲ್ತ್ ಕಿಟ್ಗಳನ್ನು ಬಾಗೇಪಲ್ಲಿ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗ ಡಾ. ಸತ್ಯನಾರಾಯಣ ರೆಡ್ಡಿಯವರಿಗೆ ಹಸ್ತಾಂತರಿಸಿದರು.
ಬಾಗೇಪಲ್ಲಿ ಪಟ್ಟಣಕ್ಕೆ ಸುರಕ್ಷತಾ ಹೆಲ್ತ್ ಕಿಟ್ ವಿತರಣೆ - Safety Health Kit
ಈ ವೈರಸ್ಗಿನ್ನೂ ಸರಿಯಾದ ಔಷಧಗಳು ಬಂದಿಲ್ಲ, ರೋಗವನ್ನು ಗುಣಪಡಿಸುವುದು ಹೇಗೆ ಎಂಬುದು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಪ್ರತಿಯೊಬ್ಬರೂ ಅಸಹಾಯಕತೆಯಿಂದಲೇ ಹೋರಾಟ ಮಾಡುತ್ತಿದ್ದಾರೆ
ಬಳಿಕ ಡಾ. ಸತ್ಯನಾರಾಯಣ ರೆಡ್ಡಿ ಮಾತನಾಡಿ, ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೊನಾ ವಿರುದ್ಧ ಬಾಗೇಪಲ್ಲಿ ಗಡಿ ತಾಲೂಕು ವೈದ್ಯರು ಹಾಗೂ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ಸೋಂಕಿತರಿಗೆ ಚಿಕಿತ್ಸೆ ನೀಡಿ, ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೈರಸ್ಗಿನ್ನೂ ಸರಿಯಾದ ಔಷಧ ಬಂದಿಲ್ಲ, ರೋಗವನ್ನು ಗುಣಪಡಿಸುವುದು ಹೇಗೆ ಎಂಬುದು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಪ್ರತಿಯೊಬ್ಬರೂ ಅಸಹಾಯಕತೆಯಿಂದಲೇ ಹೋರಾಟ ಮಾಡುತ್ತಿದ್ದಾರೆ. ಆದರೆ, ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ಬಹಳ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರು.