ಚಿಕ್ಕಬಳ್ಳಾಪುರ :ಜಿಲ್ಲೆಯ ಚಿಂತಾಮಣಿ ನಗರದ ವಾರ್ಡ್ ನಂಬರ್ 4ರಲ್ಲಿ ಮ್ಯಾನ್‌ಹೋಲ್ ತುಂಬಿ ಕೊಳಚೆ ನೀರು ಹೊರ ಬರುತ್ತಿದ್ದು, ಸೊಳ್ಳೆಗಳ ಕಾಟದಿಂದ ಅಲ್ಲಿನ ಜನರು ಕಂಗೆಟ್ಟಿದ್ದಾರೆ.
ಮ್ಯಾನ್ಹೋಲ್ನಿಂದ ಹೊರ ಬಂದ ಕೊಳಚೆ ನೀರು.. ಕಂಗಾಲಾದ ಜನರು - ಮ್ಯಾನ್ ಹೋಲ್
ಜಿಲ್ಲೆಯ ಚಿಂತಾಮಣಿ ನಗರದ ವಾರ್ಡ್ ನಂಬರ್ 4ರ ಎಲೆ ವೆಂಕಟರವಣಪ್ಪ ರಸ್ತೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮ್ಯಾನ್‌ಹೋಲ್ ತುಂಬಿ ಕೊಳಚೆ ನೀರು ಮನೆಗಳ ಮುಂದೆ ಬರುತ್ತಿದೆ. ಇದರಿಂದ ಆ ಭಾಗದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.
Chikkaballpura
ಜಿಲ್ಲೆಯ ಚಿಂತಾಮಣಿ ನಗರದ ವಾರ್ಡ್ ನಂಬರ್ 4ರ ಎಲೆ ವೆಂಕಟರವಣಪ್ಪ ರಸ್ತೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮ್ಯಾನ್‌ಹೋಲ್ ತುಂಬಿ ಕೊಳಚೆ ನೀರು ಮನೆಗಳ ಮುಂದೆ ಬರುತ್ತಿದೆ. ಇದರಿಂದ ಆ ಭಾಗದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸುತ್ತಮುತ್ತಲಿನ ಜನರು ಪರದಾಡುತ್ತಿದ್ದಾರೆ.
ಹಲವು ಬಾರಿ ಈ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸ್ವಚ್ಛತೆ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ನಗರಸಭೆ ಅಧಿಕಾರಿಗಳು ಮ್ಯಾನ್‌ಹೋಲ್ ಸ್ವಚ್ಛಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.