ಕರ್ನಾಟಕ

karnataka

ETV Bharat / state

ರಾಮಭಕ್ತರಿಂದ ಅಯೋಧ್ಯೆಗೆ ಪಾದಯಾತ್ರೆ; ಮಂದಿರ ನಿರ್ಮಾಣಕ್ಕೆ ಕಾಯ್ದೆ ತರಲು ಆಗ್ರಹ - ಬೆಂಗಳೂರಿನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ

ರಾಮಭಕ್ತರಿಬ್ಬರು ಬೆಂಗಳೂರಿನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದು ಚಿಕ್ಕಬಳ್ಳಾಪುರ ತಲುಪಿದ್ದಾರೆ.

ರಾಮಭಕ್ತರಿಂದ ಅಯೋಧ್ಯೆಗೆ ಪಾದಾಯಾತ್ರೆ;ಸಂಸತ್ತಿನಲ್ಲಿ ಮಸೂದೆ ತರಲೆಂದು ಆಗ್ರಹ

By

Published : Aug 22, 2019, 11:24 PM IST

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾಯ್ದೆ ತರಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೂ ಇಬ್ಬರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಮಭಕ್ತರಿಬ್ಬರು ಪ್ರತಿನಿತ್ಯ 40 ಕಿಲೋಮೀಟರ್ ಚಲಿಸಿ ನಂತರ ವಿಶ್ರಾಂತಿ ಪಡೆದ ಬಳಿಕ ತಮ್ಮ ಪಾದಯಾತ್ರೆ ಮುಂದುವರೆಸುತ್ತಿದ್ದಾರೆ.

ರಾಮಭಕ್ತರಿಂದ ಅಯೋಧ್ಯೆಗೆ ಪಾದಾಯಾತ್ರೆ;ಸಂಸತ್ತಿನಲ್ಲಿ ಕಾಯ್ದೆ ತರಲೆಂದು ಆಗ್ರಹ

ಎಚ್ ಎಸ್ ಮಂಜುನಾಥ್ ಹಾಗೂ ಮಂಜಯ್ಯ ಚಾವಡಿ ಇಬ್ಬರು ಬೆಂಗಳೂರು ಮೂಲದವರಾಗಿದ್ದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವನ್ನು ಆದಷ್ಟು ಬೇಗ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಇಬ್ಬರೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸೇರಿಕೊಂಡಿದ್ದು ನಂತರ ಆಂಧ್ರಪ್ರದೇಶದ ಗಡಿಯನ್ನು ದಾಟಲಿದ್ದಾರೆ. ಇನ್ನೂ ಚಿಕ್ಕಬಳ್ಳಾಪುದ ಜಿಲ್ಲೆಯ ಬಾಗೇಪಲ್ಲಿ ಜನತೆ ರಾಮರಥಕ್ಕೆ ಪೂಜೆ ಪುನಸ್ಕಾರಗಳನ್ನು ನೇರವೇರಿಸಿ ಆಶೀರ್ವಾದ ನೀಡಿದ್ದಾರೆ.

ABOUT THE AUTHOR

...view details