ಚಿಂತಾಮಣಿ(ಚಿಕ್ಕಬಳ್ಳಾಪುರ) : ತೆಲಂಗಾಣ ಮಾದರಿಯಲ್ಲಿಯೇ ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ತೆಲಂಗಾಣ ಮಾದರಿಯಲ್ಲೇ ಹಥ್ರಾಸ್ ಆರೋಪಿಗಳಿಗೆ ಶಿಕ್ಷೆ ನೀಡಿ - ಹಥ್ರಾಸ್ ಅತ್ಯಾಚಾರ ಪ್ರಕರಣ
ಯೋಗಿ ಆದಿತ್ಯನಾಥ್ ಅವರೇ, ಉತ್ತರಪ್ರದೇಶದ ಮಹಿಳೆಯರನ್ನ ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯೇ? ಯುವತಿಯ ಅಂತ್ಯ ಸಂಸ್ಕಾರದ ವೇಳೆ ಪೊಲೀಸರು ನಗುತ್ತಿದ್ದರು. ಹೀಗೆ ಮಾಡುವುದು ರಾಮ ರಾಜ್ಯದಲ್ಲಿ ಶೋಭೆ ತರುತ್ತಾ? ಆರೋಪಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು ಎಂದು ಮಾದಿಗ ದಂಡೋರ ಸಮಿತಿ ಆಗ್ರಹಿಸಿದೆ.

ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ಘಟನೆ ಅಮಾನವೀಯ. ಯುವತಿ ಮೃತಪಟ್ಟ ಕೂಡಲೆ ಪೊಲೀಸರಿಂದಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯುವತಿಯ ಮುಖವನ್ನ ಆಕೆಯ ಕುಟುಂಬಸ್ಥರಿಗೆ ನೋಡುವುದಕ್ಕೆ ಬಿಟ್ಟಿಲ್ಲ. ಮುಖ ತೋರಿಸದೆ ಪೊಲೀಸರೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಉತ್ತರ ಪ್ರದೇಶ ಪೊಲೀಸರಿಗೆ ಮಾನವೀಯತೆ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರೇ, ಉತ್ತರಪ್ರದೇಶದ ಮಹಿಳೆಯರನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯೇ? ಯುವತಿಯ ಅಂತ್ಯ ಸಂಸ್ಕಾರದ ವೇಳೆ ಪೊಲೀಸರು ನಗುತ್ತಿದ್ದರು. ಹೀಗೆ ಮಾಡುವುದು ರಾಮ ರಾಜ್ಯದಲ್ಲಿ ಶೋಭೆ ತರುತ್ತಾ? ಆರೋಪಿಗಳಿಗೆ ಕಂಡಲ್ಲಿ ಗುಂಡು ಹಾಕಬೇಕು. ಗಲ್ಲಿಗೇರಿಸಬೇಕೆಂದು ಒತ್ತಾಯ ಮಾಡಿದರು. ಇನ್ನೂ ಯೋಗಿ ಆದಿತ್ಯನಾಥ್ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.