ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಸೋಂಕು.. ಗೌರಿಬಿದನೂರಿನ ಸಿಮೆಂಟ್​ ಕಾರ್ಖಾನೆ ಮುಚ್ಚಲು ಆಗ್ರಹ - Chikkaballapur district news

ಗೌರಿಬಿದನೂರು ತಾಲೂಕಿನ ಎಸಿಸಿ ಸಿಮೆಂಟ್​ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಕಾರ್ಖಾನೆಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ACC Cement Factory
ಎಸಿಸಿ ಸಿಮೆಂಟ್​ ಕಾರ್ಖಾನೆ

By

Published : Jul 13, 2020, 5:19 PM IST

ಗೌರಿಬಿದನೂರು (ಚಿಕ್ಕಬಳ್ಳಾಪುರ):ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಾರಾಷ್ಟ್ರ ಮತ್ತು ಬಿಹಾರ ಮೂಲದ 10 ಕಾರ್ಮಿಕರಿಗೆ ಕೊರೊನಾ ಸೋಂಕು ಧೃಡಪಟ್ಟಿರುವುದರಿಂದ ಕಾರ್ಖಾನೆಯನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ನೂರಾರು ಲಾರಿಗಳು ಹೋಗಿ ಬರುತ್ತಿವೆ. ಲಾರಿ ಚಾಲಕರು ಮತ್ತು ಸಹಾಯಕರು ತೊಂಡೇಬಾವಿಯ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಿಮೆಂಟ್​ ಕಾರ್ಖಾನೆ ಮುಚ್ಚಲು ಆಗ್ರಹ

ಕನಿಷ್ಠ ಒಂದು ತಿಂಗಳು ಕಾಲ ಕಾರ್ಖಾನೆಯನ್ನು ಸ್ಥಗಿತಗೊಳಿಸಬೇಕು ಎಂದು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ. ಕಾರ್ಖಾನೆ ಮುಚ್ಚದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ‌.

ABOUT THE AUTHOR

...view details