ಕರ್ನಾಟಕ

karnataka

ETV Bharat / state

ನಾಯಿ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ನುಗ್ಗಿದ ಜಿಂಕೆ, ಸ್ಥಳೀಯರಿಂದ ರಕ್ಷಣೆ - ಜಿಂಕೆಯ ರಕ್ಷಣೆ ಚಿಕ್ಕಬಳ್ಳಾಪುರ

ಆಹಾರ ಅರಸಿ ಜಿಂಕೆಯೊಂದು ನಾಡಿಗೆ ಬಂದ ವೇಳೆ ನಾಯಿಗಳ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಜಿಂಕೆ ತನ್ನ ಪ್ರಾಣ ಉಳಿಸಿಕೊಳ್ಳಲು ಮನೆಗೆ ನುಗ್ಗಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.

Chikkaballapur
ಸ್ಥಳೀಯರಿಂದ ಜಿಂಕೆಯ ರಕ್ಷಣೆ

By

Published : Jun 13, 2020, 9:59 AM IST

ಚಿಕ್ಕಬಳ್ಳಾಪುರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ನುಗ್ಗಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.

ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ನುಗ್ಗಿದ ಜಿಂಕೆಯ ರಕ್ಷಣೆ

ಆಹಾರವನ್ನು ಹುಡುಕುತ್ತಾ ಒಂದು ವರ್ಷದ ಜಿಂಕೆಯೊಂದು ನಾಡಿಗೆ ಬಂದ ವೇಳೆ ನಾಯಿಗಳ ಗುಂಪೊಂದು ದಾಳಿ ನಡೆಸಿದೆ. ನಾಯಿಗಳ ದಾಳಿಯಿಂದ ಜಿಂಕೆ ತಪ್ಪಿಸಿಕೊಂಡು ಕೆ.ಕೆ.ಪೇಟೆ ನಗರದ ನಿವಾಸಿ ಪಾರ್ವತಮ್ಮ ಮನೆಗೆ ನುಗ್ಗಿ ಪ್ರಾಣವನ್ನು ರಕ್ಷಿಸಿಕೊಂಡಿದೆ.

ಜಿಂಕೆಯನ್ನು ಆರೈಕೆ ಮಾಡಿದ ಸ್ಥಳೀಯರು ಶಿಡ್ಲಘಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿ ನಂತರ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.

ABOUT THE AUTHOR

...view details