ಚಿಕ್ಕಬಳ್ಳಾಪುರ: ಸ್ನೇಹಿತರಿಗೆ ಸವಾಲು ಹಾಕಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಬಳಿ ನಡೆದಿದೆ.
ಸ್ನೇಹಿತರಿಗೆ ಸವಾಲು ಹಾಕಿ ಈಜಲು ಹೋಗಿದ್ದ ಯುವಕ ನೀರುಪಾಲು - hampasandra young man death news
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಯುವಕ ನೀರುಪಾಲು
ಸಂತೋಷ್ (24) ಮೃತ ಯುವಕ. ಈತ ಇಬ್ಬರು ಸ್ನೇಹಿತರಾದ ವಿಜಯ್ ಹಾಗೂ ಪವನ್ ಜೊತೆ ಸವಾಲು ಹಾಕಿಕೊಂಡು ಈಜಲು ಹೋಗಿದ್ದ ಎನ್ನಲಾಗಿದೆ. ಈ ವೇಳೆ ವಿಜಯ್ ಮತ್ತು ಪವನ್ ಈಜಿಕೊಂಡು ದಡ ಸೇರಿದ್ದು, ಸಂತೋಷ್ ನೀರಿನಲ್ಲಿ ಮುಳುಗುವುದು ಗಮನಿಸಿದ ಈ ಇಬ್ಬರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ನಿನ್ನೆ ರಾತ್ರಿ 8 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರು. ಆದರೆ ಸಂತೋಷ್ ಮೃತದೇಹ ಸಿಗದ ಕಾರಣ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.