ಕರ್ನಾಟಕ

karnataka

ಮಹಿಳೆಯ ಅರೆ ಬೆತ್ತಲೆ ಶವ ಪತ್ತೆ: ಅತ್ಯಾಚಾರಗೈದು ಕೊಲೆ ಶಂಕೆ

By

Published : Nov 8, 2022, 11:09 AM IST

ಚಿಕ್ಕಬಳ್ಳಾಪುರ ತಾಲೂಕು ಆರೋಬಂಡೆ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

People gather on the outskirts of Aurobande
ಮಹಿಳೆ ಶವ ಪತ್ತೆ ಆರೋಬಂಡೆ ಹೊರವಲಯದಲ್ಲಿ ಜಮಾಯಿಸಿ ಜನ

ಚಿಕ್ಕಬಳ್ಳಾಪುರ:ತಾಲೂಕಿನ ಆರೋಬಂಡೆ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಶವ ದೊರೆತಿದೆ. ಮೃತ ಮಹಿಳೆಗೆ ಅಂದಾಜು 30 ವಯಸ್ಸಿರಬಹುದು ಎನ್ನಲಾಗಿದೆ.

ಮಹಿಳೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಬಿಸಾಡಿ ಹೋಗಿರುವ ಬಗ್ಗೆ ಅನುಮಾನವಿದೆ. ಮಂಗಳವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ಸ್ಥಳೀಯರು ಶವ ನೋಡಿ ಭಯಭೀತರಾಗಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ

ABOUT THE AUTHOR

...view details