ಚಿಕ್ಕಬಳ್ಳಾಪುರ: ಜಿಲ್ಲೆಯ ಉಸ್ತುವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ನಂದಿ ಕ್ಷೇತ್ರ ಸೇರಿದಂತೆ ನಂದಿ ಬೆಟ್ಟದ ಅಭಿವೃದ್ದಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಚಿಕ್ಕಬಳ್ಳಾಪುರ ಹೊರವಲಯದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ ನಲ್ಲಿ ಸಭೆ ಸೇರಿದ್ದು ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗುತ್ತಿದೆ.
ಚಿಕ್ಕಬಳ್ಳಾಪುರ ರೆಸಾರ್ಟ್ನಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಅಶ್ವಥ್ ನಾರಾಯಣ
ಜಿಲ್ಲೆಯ ಉಸ್ತುವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ನಂದಿ ಕ್ಷೇತ್ರ ಸೇರಿದಂತೆ ನಂದಿ ಬೆಟ್ಟದ ಅಭಿವೃದ್ದಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಚಿಕ್ಕಬಳ್ಳಾಪುರ ಹೊರವಲಯದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜಿನಲ್ಲಿ ಸಭೆ ನಡೆಸಿದ್ದಾರೆ.
ನಂದಿ ಬೆಟ್ಟದ ಅಭಿವೃದ್ದಿಯ ಬಗ್ಗೆ ಖಾಸಗಿ ರೆಸಾರ್ಟ್ನಲ್ಲಿ ಸಭೆ ಸೇರಲು ಕಾರಣವಾದ್ರು ಏನು ಎಂಬುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತಿದೆ. ನಂದಿ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಯ ಕೊಠಡಿಗಳಿದ್ರೂ ಖಾಸಗಿ ರೆಸಾರ್ಟ್ನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿರುವುದು ಎಷ್ಟರ ಮಟ್ಟಿಗ ಸೂಕ್ತ ಎಂಬುವುದು ವಿರೋಧ ಪಕ್ಷಗಳ ಮಾತಾಗಿದೆ. ಸದ್ಯ ಇದೇ ರೆಸಾರ್ಟ್ ಸಭೆಯನ್ನು ಉಪಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ರೆಸಾರ್ಟ್ ಅಂತೇನೂ ಇಲ್ಲ. ಈ ಸ್ಥಳದಲ್ಲಿ ಲಭ್ಯತೆ ಇತ್ತು. ಇನ್ನೂ ಚಿಕ್ಕಬಳ್ಳಾಪುರದಲ್ಲಿ ಇದೊಂದೆ ರೆಸಾರ್ಟ್ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ನಂತರ ವಿಶ್ವೇಶ್ವರಯ್ಯ ಸಮಾಧಿ ಸೇರಿದಂತೆ ಮನೆಯನ್ನು ವೀಕ್ಷಿಸಿ , ವಿಟಿಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಇದೇ ವೇಳೆ ರಸ್ತೆ ಅಭಿವೃದ್ದಿ, ಹಾಸ್ಟೆಲ್, ಕ್ಯಾಂಟಿನ್, ನೀರು ಸೇರಿದಂತೆ ಸರ್ಕಾರಿ ಬಸ್ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು.