ಚಿಕ್ಕಬಳ್ಳಾಪುರ: ಯಾವ ಸರ್ಕಾರಿ ಕಚೇರಿಯಲ್ಲೂ ಸಮರ್ಪಕವಾಗಿ ಅರ್ಹ ದಲಿತರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಕೇವಲ ಬಲಾಢ್ಯರ ಪಾಲಾಗುತ್ತಿವೆ ಎಂದು ದಲಿತ ಮುಖಂಡರು ಜಿಲ್ಲೆಯ ಚಿಂತಾಮಣಿಯಲ್ಲಿ ಆರೋಪಿಸಿದ್ದಾರೆ.
ದಲಿತರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ.. ದಲಿತ ಮುಖಂಡರ ಆರೋಪ - alleges Dalit leaders ಇನ chinthamani
ಯಾವ ಸರ್ಕಾರಿ ಕಚೇರಿಯಲ್ಲೂ ಸಮರ್ಪಕವಾಗಿ ಅರ್ಹ ದಲಿತರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಕೇವಲ ಬಲಾಢ್ಯರ ಪಾಲಾಗುತ್ತಿವೆ ಎಂದು ದಲಿತ ಮುಖಂಡರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಆರೋಪಿಸಿದ್ದಾರೆ.
![ದಲಿತರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ.. ದಲಿತ ಮುಖಂಡರ ಆರೋಪ](https://etvbharatimages.akamaized.net/etvbharat/prod-images/768-512-4093907-thumbnail-3x2-vish.jpg)
ದಲಿತ ಮುಖಂಡರ ಆರೋಪ
ನಗರಸಭೆ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು, ಪ್ರತಿಯೊಂದು ಇಲಾಖೆಯಲ್ಲೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬಡವರು ಬಡವರಾಗಿಯೇ ಉಳಿಯುತ್ತಿದ್ದು,ಶ್ರೀಮಂತರು ಶ್ರೀಮಂತರಾಗಿಯೇ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ದಲಿತ ಸಮುದಾಯ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಎಲ್ಲ ಸೌಲಭ್ಯಗಳು ಸಮನಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸಾಧ್ಯ ಎಂದರು .
ದಲಿತ ಮುಖಂಡರ ಆರೋಪ