ಕರ್ನಾಟಕ

karnataka

By

Published : Jul 27, 2019, 3:32 AM IST

ETV Bharat / state

ಲೈಸನ್ಸ್​ ಇಲ್ಲದ ಖಾಸಗಿ ಬಸ್​ಗಳ ವಿರುದ್ಧ ಕ್ರಮಕ್ಕೆ  ದಸಂಸ ಆಗ್ರಹ

ಎಆರ್​ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎಆರ್​ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಖಾಸಗಿ ವಾಹನಗಳ ಮೇಲಿನ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರ:ಬೆಂಗಳೂರಿನಿಂದ ಮುರುಗಮಲ್ಲದವರೆಗೆ ಪರವಾನಿಗೆ ಇಲ್ಲದ ಹಲವಾರು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಎಆರ್​ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಂದ ಖಾಸಗಿ ವಾಹನಗಳ ಮೇಲಿನ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಸಿ. ಜನಾರ್ದನ ಬಾಬು ಮಾತನಾಡಿ, ಇಲ್ಲಿನ ಎಆರ್​ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ತಾಲ್ಲೂಕಿನ ಹಲವಾರು ಖಾಸಗಿ ಶಾಲೆಯ ವಾಹನಗಳಲ್ಲಿ ಮಕ್ಕಳನ್ನು ಕುರಿಗಳ ರೀತಿ ತುಂಬಿಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಮೇಲಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಸಂಘಟನೆಯ ಸಿ. ಮುನಿರಾಜು, ನಾರಾಯಣಸ್ವಾಮಿ. ರಮೇಶ್, ಆನಂದ್ , ಕೃಷ್ಣಪ್ಪ, ವೆಂಕಟೇಶ್ ಮೂರ್ತಿ, ಕದಿರಪ್ಪ , ಮೂರ್ತಿ ಸೇರಿ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.

For All Latest Updates

TAGGED:

Ckb

ABOUT THE AUTHOR

...view details