ಕರ್ನಾಟಕ

karnataka

ETV Bharat / state

ನೆರೆ ಪರಿಹಾರಕ್ಕೆ ಹಣವಿಲ್ಲವೆಂದು ನಾವು ಹೇಳಿಲ್ಲ: ಸಚಿವ ಸಿ.ಟಿ. ರವಿ - CT ravi news

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆದು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ಸಿ.ಟಿ ರವಿ ಹೇಳಿಕೆ

By

Published : Oct 4, 2019, 11:25 PM IST

ಚಿಕ್ಕಬಳ್ಳಾಪುರ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆದು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ಸಿ.ಟಿ ರವಿ ಹೇಳಿಕೆ

ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಆದ್ರೆ ಎಲ್ಲ ರಾಜ್ಯಗಳಿಗೆ ನೀಡುವಾಗ ನಮಗೂ ಪರಿಹಾರ ಸಿಗುತ್ತದೆ. ನೆರೆ ಪರಿಹಾರಕ್ಕೆ ಹಣವಿಲ್ಲವೆಂದು ನಾವು ಹೇಳಿಲ್ಲ. ಹಣವಿಲ್ಲದಿದ್ರೆ ಆಶಾಕಾರ್ಯಕರ್ತೆಯರಿಗೆ ಮಾಸಾಶನವನ್ನು ಏರಿಕೆ ಮಾಡಲು ಸಾಧ್ಯವೇ? ಒಟ್ಟು 11 ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದ್ದು, ಯಾವ ರಾಜ್ಯಕ್ಕೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆ ಮಾಡುವಾಗ ನಮ್ಮ ರಾಜ್ಯಕ್ಕೂ ಸಿಗಲಿದೆ. ಇನ್ನೂ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ತಿಳಿಸಿದರು.

ರಾಜಕಾರಣದಲ್ಲಿ ಅವರ ಯೋಗ್ಯತೆ ಏನು ಎಂಬುವುದನ್ನು ಜನರೇ ಹೇಳಿದ್ದಾರೆ. ಆದರೆ ಅವರ ಚಲನಚಿತ್ರದ ಯೋಗ್ಯತೆ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಕೀಯ ಯೋಗ್ಯತೆಗೆ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಮ್ಮ ಪಕ್ಷದ ರಾಜಕೀಯ ಯೋಗ್ಯತೆಗೆ ನಮಗೂ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಪ್ರಕಾಶ್​ ರೈ ಗೆ ತಿರುಗೇಟು ನೀಡಿದರು.

ABOUT THE AUTHOR

...view details