ಚಿಕ್ಕಬಳ್ಳಾಪುರ:ಗುಪ್ತಚರ ವರದಿಗಳ ಪ್ರಕಾರ ಬಿಜೆಪಿ ಈ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಪಕ್ಷ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಗುಪ್ತಚರ ವರದಿಗಳು ತಿಳಿಸಿವೆ. ಬಿಜೆಪಿ ಪಕ್ಷವನ್ನು ಸೋಲಿಸಲು ಸಾಕಷ್ಟು ಪಿತೂರಿಗಳು ನಡೆಯುತ್ತಿವೆ. ಆದರೆ, ಆದ್ಯಾವುದೂ ಸಾಧ್ಯವಿಲ್ಲ. ಇನ್ನು, ಕಾರ್ಯಕರ್ತರು ತಳ ಮಟ್ಟದಿಂದ ಶ್ರಮವಹಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.