ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಕೀಟಬಾಧೆ (ಕಂಬಳಿ ಹುಳುಗಳ) ಕಂಟಕದಿಂದ ರೈತ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಪರಿಣಾಮ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮದ ರೈತ ಧನಂಜಯ 2 ಎಕರೆ ಸೂರ್ಯಕಾಂತಿ, 1 ಎಕರೆ ಬೀನ್ಸ್, ಜೋಳ ಹಾಗೂ ರಾಗಿ ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆಗೆ ಕಂಬಳಿ ಹುಳುಗಳು ದಾಳಿ ನಡೆಸಿ ನಾಶಮಾಡಿವೆ.
ಕಳೆದೊಂದು ತಿಂಗಳಿನಿಂದ ತಾಲೂಕಿನಾದ್ಯಂತ ಮಳೆ ಅಬ್ಬರಿಸುತ್ತಿದೆ. ಹೀಗಾಗಿ, ರೈತ ಸಂಗ್ರಹಿಸಿಟ್ಟಿದ್ದ ಬೆಳೆ ನೀರುಪಾಲು ಆಗಿತ್ತು. ಇದರ ನಡುವೆ ಕಂಬಳಿ ಹುಳುಗಳ ಬಾಧೆ ಹೆಚ್ಚಾಗಿದೆ. ಹೀಗಾಗಿ ಅನ್ನದಾತನಿಗೆ ದಿಕ್ಕು ತೋಚದಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ : ತಾಲೂಕಿನಲ್ಲಿ ಇತ್ತೀಚಿಗೆ ಕೀಟ ಬಾಧೆ ಹೆಚ್ಚಾಗಿದ್ದು, ಅನೇಕ ಬಾರಿ ಕೀಟನಾಶಕದ ಬಗ್ಗೆ ಮಾಹಿತಿ ಕೊಡುವಂತೆ ಹಾಗೂ ಕೀಟಗಳನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಏನೂ ಪ್ರಯೋಜನ ಆಗುತ್ತಿಲ್ಲ ಎಂದು ಹೇಳುತ್ತಾರೆ ರೈತ ಧನಂಜಯ್.