ಚಿಕ್ಕಬಳ್ಳಾಪುರ:ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹಸು, ಎಮ್ಮೆ, ಹೋರಿ ಹಾಗೂ ಕರುಗಳು ಸೇರಿದಂತೆ ಒಟ್ಟು 51 ಜಾನುವಾರುಗಳನ್ನು ಜಿಲ್ಲೆಯ ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಸಾಯಿಖಾನೆಗೆ ಅಕ್ರಮವಾಗಿ ಗೋ ಸಾಗಾಟ: ಗೌರಿಬಿದನೂರು ಪೊಲೀಸರಿಂದ 51 ಜಾನುವಾರು ರಕ್ಷಣೆ - ಚಿಕ್ಕಬಳ್ಳಾಪುರ
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 51 ಜಾನುವಾರುಗಳನ್ನು ಗೌರಿಬಿದನೂರು ಪೊಲೀಸರು ರಕ್ಷಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಿಂದ ಬೆಂಗಳೂರಿನ ಶಿವಾಜಿನಗರ ಕಸಾಯಿಖಾನೆಗೆ ಅಕ್ರಮವಾಗಿ ಸುಮಾರು 51 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀನಾರಾಯಣ ನೇತೃತ್ವದ ತಂಡ ಇಂದು ಬೆಳಗ್ಗಿನ ಜಾವ 4:30 ರ ಸಮಯದಲ್ಲಿ ತೊಂಡೇಬಾವಿ ವರ ಪೊಲೀಸ್ ಠಾಣೆ ಬಳಿ ಕಂಟೈನರ್‌ಗಳ ಮೇಲೆ ದಾಳಿ ಮಾಡಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.
31 ಎತ್ತುಗಳು, 1 ಎಮ್ಮೆ, 18 ಕರುಗಳು ಹಾಗೂ 3 ಕಂಟೈನರ್ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಮೂವರು ಚಾಲಕರು ಹಾಗೂ ಮೂವರು ಕ್ಲೀನರ್‌ಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಕ್ರೀದ್ ಹಬ್ಬ ಸಮೀಪಿಸುತ್ತಿದಂತೆ ಸಾಕಷ್ಟು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಚುರುಕಾಗಿ ತನಿಖೆ ನಡೆಸಿ ಗೋವುಗಳ ರಕ್ಷಣೆಗೆ ಮುಂದಾಗಿದೆ.