ಬಾಗೇಪಲ್ಲಿ:ಸಿಡಿಲು ಬಡಿದು ಸೀಮೆ ಹಸು ಮೃತಪಟ್ಟಿರುವ ಘಟನೆ ಪಾತಪಾಳ್ಯ ಹೋಬಳಿಯ ಯರ್ರಗಾನಪಲ್ಲಿ (ಮ್ಯಾಕೋಳಪಲ್ಲಿ) ಗ್ರಾಮದಲ್ಲಿ ನಡೆದಿದೆ.
ಬಾಗೇಪಲ್ಲಿ: ಸಿಡಿಲು ಬಡಿದು ಸೀಮೆ ಹಸು ಸಾವು - ಸೀಮೆ ಹಸು
ಸಿಡಿಲು ಬಡಿದು ದನದ ಕೊಟ್ಟಿಗೆಯಲ್ಲಿದ್ದ ಸೀಮೆ ಹಸು ಸಾವನ್ನಪ್ಪಿದೆ.
Cow
ಯರ್ರಗಾನಪಲ್ಲಿ ಗ್ರಾಮದ ಬಡ ರೈತ ರಾಮಪ್ಪ ಬಿನ್ ವೆಂಕಟರಾಮಪ್ಪ ಎಂಬುವರಿಗೆ ಸೇರಿದ ಸುಮಾರು 60 ಸಾವಿರ ರೂ ಬೆಲೆ ಬಾಳುವ ಸೀಮೆಹಸು ಸಾವನ್ನಪ್ಪಿದೆ.
ಜೀವನಾಧಾರವಾಗಿದ್ದ ಸೀಮೆ ಹಸು ಮೃತಪಟ್ಟಿದ್ದರಿಂದ ದಿಕ್ಕು ತೋಚದಂತಾಗಿದೆ ಎಂದು ರಾಮಪ್ಪ ಅಳಲು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪಶು ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ ರಾಮಪ್ಪನಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.