ಚಿಕ್ಕಬಳ್ಳಾಪುರ:ಭಾರತಕ್ಕೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಎರಡು ಬಂದಿದ್ದು, ಕೇವಲ 210 ರೂಪಾಯಿಗೆ ಲಸಿಕೆ ಸಿಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಎರಡು ಸಾವಿರದಿಂದ ಮೂರು ಸಾವಿರದವರೆಗೂ ಲಸಿಕೆಗೆ ಹಣ ನೀಡಬೇಕಾಗಿದೆ. 135 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅಲ್ಲೋಲ ಕೊಲ್ಲೋಲ ಆಗಬಾರದೆಂಬ ಕಾರಣಕ್ಕೆ ಕೇವಲ 210 ರೂಪಾಯಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಇದರಲ್ಲಿಯೂ ರಾಜಕೀಯ ಮಾಡ್ತಾ ಇದ್ದಾರೆ ಎಂದ ಅವರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಜೆಪಿ ಲಸಿಕೆ ಅಂತ ಹೇಳ್ತಾರೆ, ನಿಜಕ್ಕೂ ಅವರೆಲ್ಲ ರಾಜಕೀಯವಾಗಿ ದಿವಾಳಿ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.