ಚಿಕ್ಕಬಳ್ಳಾಪುರ:ಕೊರೊನಾ ಟಫ್ ರೂಲ್ಸ್ ಪಾಲಿಸದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನಡುವಳಿಕೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಆರೋಗ್ಯ ಸಚಿವರ ನಿರ್ಲಕ್ಷ್ಯದ ಬಗ್ಗೆ ಈಟಿವಿ ಭಾರತನಲ್ಲಿ ವರದಿಯಾಗಿತ್ತು. ಆದರೆ ಸಚಿವ ಸುಧಾಕರ್ ಮಾತ್ರ ನಾನೇ ಸರ್ಕಾರದ ರೂಲ್ಸ್‌ಗಳನ್ನು ಪಾಲನೆ ಮಾಡಿದಿದ್ರೆ ಹೇಗೆ ಎಂಬ ಉಪದೇಶಗಳನ್ನು ನೀಡಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಉಪದೇಶಗಳನ್ನು ನೀಡಿದ್ರು. ಆದರೆ ನಿನ್ನೆ ಮತ್ತೆ ಕೊರೊನಾ ರೂಲ್ಸ್ನ್ನು ಬ್ರೇಕ್ ಮಾಡಿದ್ದಾರೆ.
ಕೊರೊನಾ ಟಫ್ ರೂಲ್ಸ್ ಪಾಲಿಸದ ಆರೋಗ್ಯ ಸಚಿವ ಸಚಿವ ಸುಧಾಕರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು, ಬೆಂಬಲಿಗರು ಮತ್ತು ಸಚಿವರು ಬಹುತೇಕ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡದೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದರು. ಇವೆಲ್ಲಾ ನಿಯಮಗಳು ರಾಜಕೀಯ ಪಕ್ಷಗಳಿಗೆ ಅನ್ವಯಿಸುವುದಿಲ್ಲ, ಜನಸಾಮಾನ್ಯರಿಗೆ ಮಾತ್ರ ಎಂದು ತೋರಿಸಿಕೊಟ್ಟಂತಾಗಿದೆ.
ಸದ್ಯ ಸಚಿವರಿಗೆ ಕೊರೊನಾ ರೂಲ್ಸ್ ಅನ್ವಯವಾಗಲ್ವಾ?. ಕೇವಲ ಜನಸಾಮಾನ್ಯರಿಗೆ ಮಾತ್ರ ಕೊರೊನಾ ಟಫ್ ರೂಲ್ಸ್, ನೈಟ್ ಕರ್ಫ್ಯೂ. ಜನಸಾಮಾನ್ಯರ ಉಪದೇಶಗಳನ್ನು ನೀಡುವ ಮೊದಲು ಅವರು ಕೊರೊನಾ ನಿಯಮ ಪಾಲನೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದರು.