ಕರ್ನಾಟಕ

karnataka

ETV Bharat / state

ಹಬ್ಬದ ಸಂಭ್ರಮದಲ್ಲಿ ಕೋವಿಡ್ ನಿಯಮ ಮರೆತ ಸಾರ್ವಜನಿಕರು - Chikkaballapur District

ಗಣೇಶೋತ್ಸವ ಆಚರಣೆಯ ವೇಳೆ ನಿಗಾ ವಹಿಸಿ ಕೊರೊನಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆಯಾ ಜಿಲ್ಲಾಡಳಿತಗಳು ಸೂಚನೆ ನೀಡಿದ್ದರೂ, ಜನತೆ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೊರೊನಾ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಜಿಲ್ಲೆಯ ಮಾರುಕಟ್ಟೆ ಜನಸಂಧಣಿಯಿಂದ ತುಂಬಿರುವುದು ವರದಿಯಾಗಿದೆ.

Covid norms forgotten by people in Market
ಚಿಕ್ಕಬಳ್ಳಾಪುರ: ಹಬ್ಬದ ಸಂಭ್ರಮದಲ್ಲಿ ಕೋವಿಡ್ ನಿಯಮ ಮರೆತ ಸಾರ್ವಜನಿಕರು

By

Published : Aug 22, 2020, 5:26 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಗಣೇಶೋತ್ಸವ ಪ್ರಯುಕ್ತ ಜನಜಂಗುಳಿ ಕಂಡುಬಂದಿದೆ. ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರಿನಲ್ಲಿ ಸಾರ್ವಜನಿಕರು ಹಬ್ಬದ ನೆಪದಲ್ಲಿ ಸಾಮಾಜಿಕ ಅಂತರ ಮರೆತು ವ್ಯಾಪಾರ ವಹಿವಾಟಿಗೆ ಸೈ ಎಂದಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,300ರ ಗಡಿದಾಟುತ್ತಿದ್ದು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಜಿಲ್ಲೆಯ ಜನತೆ ಮಾತ್ರ ಅದ್ಯಾವುದಕ್ಕೂ ತಲೆಕೆಸಿಕೊಳ್ಳದೆ ಕೋವಿಡ್ ನಿಯಮ ಗಾಳಿಗೆ ತೂರಿ ಹಬ್ಬದ ತಯಾರಿಯಲ್ಲಿ ತೊಡಗಿದ್ದು ಕಂಡುಬಂದಿದೆ.

ಜನರಿಂದ ತುಂಬಿರುವ ನಗರದ ಪ್ರಮುಖ ರಸ್ತೆ

ಗಣೇಶೋತ್ಸವ ವೇಳೆ ಕೊರೊನಾ ಹರಡುವ ಭೀತಿಯಲ್ಲಿ ರಾಜ್ಯ ಸರ್ಕಾರ ನಿಯಾಮಾವಳಿಗಳನ್ನು ಜಾರಿ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಜನಸಂದಣಿ ಸೇರಿದ್ದು, ಯಾವ ನಿಯಮವೂ ಪಾಲನೆ ಆಗದಿರುವುದು ಕಂಡುಬಂದಿದೆ.

ABOUT THE AUTHOR

...view details