ಚಿಕ್ಕಬಳ್ಳಾಪುರ:ಟಾಸ್ಕ್ಫೋರ್ಸ್ ಎಷ್ಟು ಚುರುಕಾಗಿ ಕಾರ್ಯನಿರ್ವಹಿಸುತ್ತೋ, ಅಷ್ಟು ಬೇಗ ಸೋಂಕಿತರ ಸಂಖ್ಯೆ ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಕೋವಿಡ್ ನಿರ್ವಹಣೆ ಕುರಿತು ತುರ್ತು ಸಭೆ ಚಿಂತಾಮಣಿ ನಗರದ ತಾ.ಪಂ ಕಾರ್ಯಾಲಯದಲ್ಲಿ ಕೋವಿಡ್ ನಿರ್ವಹಣೆ ಕುರಿತು ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಮಟ್ಟದಿಂದ ವಾರ್ಡ್ ಮಟ್ಟದವರೆಗೂ ಟಾಸ್ಕ್ಫೋರ್ಸ್ ಸಮಿತಿ ರಚಿಸಲಾಗಿದೆ. ಯಾವುದೇ ವಾರ್ಡ್ ಹಾಗೂ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಅದಕ್ಕೆ ಆ ಭಾಗದ ನೋಡಲ್ ಅಧಿಕಾರಿಯೇ ಹೊಣೆ. ನಿರ್ಲಕ್ಷ್ಯ ಕಂಡುಬಂದಲ್ಲಿ ಯಾವುದೇ ನೋಟಿಸ್ ನೀಡದೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೋಂಕಿತರ ಸಂಖ್ಯೆಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿ 13-14ನೇ ಸ್ಥಾನದಲ್ಲಿದೆ. ಅದರಲ್ಲಿ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆ ತಾಲೂಕುಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನಾಗಿ ಕಾರ್ಯನಿವಹಿಸಬೇಕು ಎಂದು ನಿರ್ದೇಶನ ಕೊಟ್ಟರು.
ಪೌರಾಯುಕ್ತರಿಗೆ ತರಾಟೆ:ನಗರ ಭಾಗದ ಯಾವುದೇ ನೋಡಲ್ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸದಿದ್ದರಿಂದ ಡಿಸಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಯಾವೊಬ್ಬ ನೋಡಲ್ ಅಧಿಕಾರಿ ತಪ್ಪು ಮಾಡಿದ್ರೂ ಅದಕ್ಕೆ ನಿಮಗೇನೇ ಶಿಕ್ಷೆ ಎಂದರು.
ಇದನ್ನೂ ಓದಿ:ಹೆಚ್ಚುವರಿ ಪಾವತಿ ಮೊತ್ತ ಗುತ್ತಿಗೆದಾರರಿಂದ ವಸೂಲು ಮಾಡಿ: ಸಚಿವ ಈಶ್ವರಪ್ಪ ಸೂಚನೆ