ಚಿಕ್ಕಬಳ್ಳಾಪುರ:ಜವಳಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ದ ದಂಪತಿಗಳನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಪದ್ಮಾವತಮ್ಮ(60) ಡಿ. ವಿ ಶ್ರೀನಿವಾಸಲು(70) ದಂಪತಿಗಳು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಕೊಲೆ ನಡೆದಿದ್ದು, ನಗರದ ಜನತೆ ಬೆಚ್ಚಿಬಿದ್ದಿದ್ದರು.
ನಗರದ ವಾಸವಿ ಕಲ್ಯಾಣ ಮಂಟಪದ ಹಿಂಭಾಗ ವಾಸವಿದ್ದ ವೃದ್ದ ದಂಪತಿಗಳು ಸ್ವಂತ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಇನ್ನೂ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದ ದಂಪತಿಗಳು ಜವಳಿ ಅಂಗಡಿಯನ್ನು ಮಾಡಿಕೊಂಡಿದ್ದರು.