ಚಿಕ್ಕಬಳ್ಳಾಪುರ :ರಾತ್ರಿ ಗ್ಯಾಸ್ ಲೀಕ್ ಆದ ಹಿನ್ನೆಲೆ ಮುಂಜಾನೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ. ನಗರದ ಕಲ್ಲೂಡಿ ಬಡಾವಣೆಯ ವಿನಯ್ ಹಾಗೂ ನಂದಿನಿ ಎಂಬುವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ದಂಪತಿ.
ಗಾಯಗೊಂಡಿರುವ ದಂಪತಿ ವಿನಯ್ ನಗರದಲ್ಲಿ ಟ್ರ್ಯಾಕ್ಟರ್, ನೀರಿನ ಟ್ಯಾಂಕರ್ಗಳನ್ನು ಓಡಿಸಿ ಸಾಮಾನ್ಯ ಜೀವನ ನಡೆಸುತ್ತಿದ್ದರು. ಕಳೆದ ರಾತ್ರಿ ಟ್ರ್ಯಾಕ್ಟರ್ ಕೆಲಸ ಮುಗಿಸಿ ಬಂದು ಮನೆಯಲ್ಲಿ ಮಲಗಿದ್ದರು.
ರಾತ್ರಿ ವೇಳೆ ಗ್ಯಾಸ್ ಲೀಕ್ ಆಗಿದ್ದು, ದಂಪತಿಗೆ ಗೊತ್ತಾಗಿಲ್ಲ. ಮುಂಜಾನೆ 5 ಗಂಟೆಗೆ ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆ ಛಿದ್ರ ಛಿದ್ರವಾಗಿದೆ.