ಚಿಕ್ಕಬಳ್ಳಾಪುರ:ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಮನನೊಂದಿದ್ದ ದಂಪತಿ ಒಂದೇ ಸೀರೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಾಲೂಕಿನ ಸೂಲಾಕುಂಟೆಯಲ್ಲಿ ಶನಿವಾರ ನಡೆದಿದೆ. ಆಟೋ ಚಾಲಕನಾಗಿದ್ದ ಚಂದ್ರಶೇಖರ್ (32) ಹಾಗೂ ಶಶಿಕಲಾ (24) ಮೃತರು.
ಇವರಿಬ್ಬರೂ ಮದುವೆಯಾಗಿ ನಾಲ್ಕು ವರ್ಷದಿಂದ ಅನ್ಯೋನ್ಯತೆಯಿಂದ ಬದುಕುತ್ತಿದ್ದರು. ಆದರೆ ಮಕ್ಕಳಾಗಲಿಲ್ಲ ಅಂತ ನೊಂದಿದ್ದರಲ್ಲದೆ, ದೇವಸ್ಥಾನಗಳಲ್ಲಿ ಪೂಜೆ, ಹೋಮಗಳನ್ನು ಮಾಡಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಅರಸೀಕೆರೆಯಲ್ಲಿ ಅಕ್ಕನನ್ನು ಕೊಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ