ಚೇಳೂರು (ಚಿಕ್ಕಬಳ್ಳಾಪುರ) :ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವವನ್ನ ಮೂರೇ ಜನ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ಘಟನೆ ಚೇಲೂರು ತಾಲೂಕಿನ ಬೈರಪ್ಪನಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಭೀತಿ.. ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವ ಮೂರೇ ಜನ ಹೊತ್ತೊಯ್ದರು.. - chikkaballapur corona pandemic
ಬೆಂಗಳೂರಿನಿಂದ ಬಂದ ಮೃತರ ಮಗ, ಮಗಳು, ಅಳಿಯ ಮೂರೇ ಜನ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕೊರೊನಾ ಭೀತಿ: ಅನಾರೋಗ್ಯದಿಂದ ಮೃತಪಟ್ಟ ಮಹಿಳೆಯ ಶವ ಮೂರೇ ಜನ ಹೊತ್ತೊಯ್ದರು
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೈರಪ್ಪನಪಲ್ಲಿ ಗ್ರಾಮದ ನಾರಾಯಣಮ್ಮ (55) ಎಂಬುವರು ಸೋಮವಾರ ರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಷಯವನ್ನ ಗ್ರಾಮಸ್ಥರು ಬೆಂಗಳೂರಿನಲ್ಲಿದ್ದ ಮಗ, ಮಗಳಿಗೆ ತಿಳಿಸಿದ್ದಾರೆ. ಆದರೆ, ಕೊರೊನಾ ಭಯದಿಂದ ಯಾರೊಬ್ಬರು ಸಹ ಮೃತದೇಹದ ಬಳಿ ಹೋಗಿರಲಿಲ್ಲ.
ಬಳಿಕ ಬೆಂಗಳೂರಿನಿಂದ ಬಂದ ಮೃತರ ಮಗ, ಮಗಳು, ಅಳಿಯ ಮೂರೇ ಜನ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾರೆ.