ಚಿಕ್ಕಬಳ್ಳಾಪುರ: ನಗರ ಸಭೆ ಆಯುಕ್ತರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಾಗೇಪಲ್ಲಿಯಲ್ಲಿ 2, ಚಿಂತಾಮಣಿ 2, ಶಿಡ್ಲಘಟ್ಟ 4 ಗೌರಿಬಿದನೂರು ಹಾಗೂ ಗುಡಿಬಂಡೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಗುಡಿಬಂಡೆಯಲ್ಲಿ 52 ವರ್ಷದ ಪುರುಷ ಹಾಗೂ ಚಿಕ್ಕಬಳ್ಳಾಪುರದ 64 ವರ್ಷದ ಮಹಿಳೆಗೆ ಐಎಲ್ಐ ಮೂಲಕ ಸೋಂಕು ತಗುಲಿದೆ. ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆಗೆ ಪಿ-11995 ರ ಸಂಪರ್ಕದಿಂದ, 17 ವರ್ಷದ ಬಾಲಕಿಗೆ ಪಿ-30624 ಸಂಪರ್ಕದಿಂದ, 28 ವರ್ಷದ ಮಹಿಳೆಗೆ ಪಿ - 31133 ಸಂಪರ್ಕದಿಂದ, 22 ವರ್ಷದ ಯುವಕ 52 ವರ್ಷದ ಮಹಿಳೆಗೆ ಪಿ-30624 ಸಂಪರ್ಕದಿಂದ, 58 ವರ್ಷದ ಚಿಂತಾಮಣಿ ಮಹಿಳೆ, 49 ವರ್ಷದ ಗೌರಿಬಿದನೂರಿನ ಪುರುಷ ಹಾಗೂ 57 ವರ್ಷದ ಶಿಡ್ಲಘಟ್ಟದ ಪುರುಷನಿಗೆ ಬೆಂಗಳೂರಿನ ನಂಟಿನಿಂದ ಸೋಂಕು ಧೃಡಪಟ್ಟಿದೆ.
ಇನ್ನು ಚಿಂತಾಮಣಿಯ 21 ವರ್ಷದ ಯುವತಿಗೆ ಪಿ-31144 ಸಂಪರ್ಕದಿಂದ, ಚಿಕ್ಕಬಳ್ಳಾಪುರದ 21 ವರ್ಷದ ಯುವಕನಿಗೆ ಪಿ- 18107 ಸಂಪರ್ಕದಿಂದ, ಶಿಡ್ಲಘಟ್ಟದ 50 ವರ್ಷದ ಮಹಿಳೆಗೆ ಪಿ-14413 ಸಂಪರ್ಕದಿಂದ, 30 ವರ್ಷದ ಮಹಿಳೆಗೆ ಪಿ-14413 ಸಂಪರ್ಕ ಹಾಗೂ 50 ವರ್ಷದ ಬಾಗೇಪಲ್ಲಿ ಮೂಲದ ವ್ಯಕ್ತಿಗೆ ಪಿ-30602 ಸಂಪರ್ಕದಿಂದ ಕೊರೊನಾ ಧೃಡಪಟ್ಟಿದೆ.