ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಬುಧವಾರ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 131 ಆಗಿದೆ.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಾಲ್ವರಿಗೆ ಕೊರೊನಾ ದೃಢ : ಸೋಂಕಿತರ ಸಂಖ್ಯೆ 131 ಕ್ಕೆ ಏರಿಕೆ - ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಾಲ್ವರಿಗೆ ಕೊರೊನಾ ದೃಢ
ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟಿದರೂ ಎರಡು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆ ಸ್ವಲ್ಪ ನಿರಾಳರಾಗಿದ್ದ ಚಿಕ್ಕಬಳ್ಳಾಪುರದ ಜನರಿಗೆ ಮತ್ತೆ ಆತಂಕ ಶುರುವಾಗಿದ್ದು, ಬುಧವಾರ ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಪಾಸಿಟಿವ್ ಪ್ರಕಣಗಳು ಪತ್ತೆಯಾಗಿವೆ.
![ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಾಲ್ವರಿಗೆ ಕೊರೊನಾ ದೃಢ : ಸೋಂಕಿತರ ಸಂಖ್ಯೆ 131 ಕ್ಕೆ ಏರಿಕೆ Corona positive for four in Chikkaballapur onWednesday](https://etvbharatimages.akamaized.net/etvbharat/prod-images/768-512-7375180-716-7375180-1590642088081.jpg)
ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಾಲ್ವರಿಗೆ ಕೊರೊನಾ ದೃಢ
ಹೊಸ ಸೋಂಕಿತರನ್ನು ಪಿ -2407, ಪಿ-2408, ಪಿ-2409, ಹಾಗೂ ಪಿ-2410 ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಯಾವುದೇ ಪ್ರಕರಣಗಳು ಪತ್ತೆಯಾಗದೆ ಇದ್ದಿದ್ದರಿಂದ ಜಿಲ್ಲೆಯ ಜನ ಸ್ವಲ್ಪ ನಿರಾಳರಾಗಿದ್ದರು. ಆದರೆ, ಬುಧವಾರ ಮತ್ತೆ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು ಜನರ ಆತಂಕ್ಕೆ ಕಾರಣವಾಗಿದೆ.
ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಇದುವರೆಗೆ ಒಟ್ಟು 19 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.