ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಂದು 95 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 2,811ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ: 26 ಮಂದಿ ಗುಣಮುಖ, 95 ಪಾಸಿಟಿವ್ ಕೇಸ್ ಪತ್ತೆ - Chikkaballapur Corona Case
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 95 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 26 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು 26 ಮಂದಿ ಗುಣಮುಖ..95 ಪಾಸಿಟಿವ್ ಕೇಸ್ ಪತ್ತೆ
ಚಿಕ್ಕಬಳ್ಳಾಪುರ 29, ಬಾಗೇಪಲ್ಲಿ 05, ಚಿಂತಾಮಣಿ 27, ಗೌರಿಬಿದನೂರು 27, ಗುಡಿಬಂಡೆ 03, ಶಿಡ್ಲಘಟ್ಟದಲ್ಲಿ 4 ಜನರಿಗೆ ಕೊರೊನಾ ದೃಢಪಟ್ಟಿದೆ. ಇಂದು 26 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಗೌರಿಬಿದನೂರಿನ 50 ವರ್ಷದ ಪುರುಷ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.