ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿಂದು 143 ಕೊರೊನಾ...61 ಮಂದಿ ಗುಣಮುಖ - ಚಿಕ್ಕಬಳ್ಳಾಪುರ ಕೊರೊನಾ ಅಪ್​ಡೇಟ್​

ಚಿಕ್ಕಬಳ್ಳಾಪುರದಲ್ಲಿಂದು 143 ಕೊರೊನಾ ಸೋಂಕು ದೃಢಪಟ್ಟಿದ್ದು, 61 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Corona positive for 143 people in Chikkaballapur district
ಚಿಕ್ಕಬಳ್ಳಾಪುರದಲ್ಲಿಂದು 143 ಕೊರೊನಾ...61 ಮಂದಿ ಗುಣಮುಖ

By

Published : Sep 2, 2020, 10:21 PM IST

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಂದು 143 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,424ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ 42, ಚಿಂತಾಮಣಿ 26, ಗೌರಿಬಿದನೂರು 20, ಬಾಗೇಪಲ್ಲಿ 36, ಗುಡಿಬಂಡೆ 9 ಹಾಗೂ ಶಿಡ್ಲಘಟ್ಟದಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 13 ಸೋಂಕಿತರಿಗೆ ಐಎಲ್ಐ ಸಂಪರ್ಕ, 12 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ 118 ಜನರಿಗೆ ಸೋಂಕಿತರ ಸಂಪರ್ಕದಿಂದ ಧೃಡಪಟ್ಟಿದೆ.

ಇನ್ನೂ ಚಿಂತಾಮಣಿ 12 ಸೋಂಕಿತರು, ಚಿಕ್ಕಬಳ್ಳಾಪುರ 12, ಬಾಗೇಪಲ್ಲಿ 6, ಶಿಡ್ಲಘಟ್ಟ 2, ಗೌರಿಬಿದನೂರು‌ 23 ಹಾಗೂ ಗುಡಿಬಂಡೆ‌ ವ್ಯಾಪ್ತಿಯ 6 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 3,551ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 847 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details