ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿಂದು 127 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 6,148ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿಂದು 127 ಜನರಿಗೆ ಕೊರೊನಾ... 160 ಮಂದಿ ಗುಣಮುಖ - Chikballapur News
ಚಿಕ್ಕಬಳ್ಳಾಪುರದಲ್ಲಿಂದು 127 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 160 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರ 37, ಚಿಂತಾಮಣಿ 22, ಗೌರಿಬಿದನೂರು 43, ಬಾಗೇಪಲ್ಲಿ 13, ಗುಡಿಬಂಡೆ 6 ಹಾಗೂ ಶಿಡ್ಲಘಟ್ಟ ತಾಲೂಕಿನ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ 20 ಮಂದಿಗೆ ಐಎಲ್ಐ ಸಂಪರ್ಕ, 35 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ 72 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಇಂದು ಚಿಕ್ಕಬಳ್ಳಾಪುರ ಮೂಲದ 60 ಹಾಗೂ 55 ವರ್ಷದ ಪುರುಷರಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ಚಿಂತಾಮಣಿ 55, ಚಿಕ್ಕಬಳ್ಳಾಪುರ 28, ಬಾಗೇಪಲ್ಲಿ 19, ಶಿಡ್ಲಘಟ್ಟ 24, ಗೌರಿಬಿದನೂರು 26 ಹಾಗೂ ಗುಡಿಬಂಡೆ ವ್ಯಾಪ್ತಿಯ 8 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 5,154 ಮಂದಿ ಗುಣಮುಖರಾಗಿದ್ದಾರೆ. ಸದ್ಯ, 918 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.