ಚಿಕ್ಕಬಳ್ಳಾಪುರ: ಕಳೆದ ಐದು ದಿನಗಳ ಹಿಂದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೃದ್ಧನಿಗೆ ಕೊರೊನಾ ಟೆಸ್ಟ್ ಮಾಡದೇ ಉಪಚರಿಸಿದ ಕಾರಣ ವೃದ್ಧ ಮೃತ ಪಟ್ಟಿದ್ದಾನೆ. ಬಳಿಕ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.
ವೈದ್ಯರ ಎಡವಟ್ಟು : ಮೃತ ವೃದ್ಧನ ಕೊರೊನಾ ವರದಿ ಪಾಸಿಟಿವ್
ಜೂ. 25ರಂದು ವೃದ್ಧ ಮೃತಪಟ್ಟಿದ್ದು ಸಹಜ ಸಾವು ಎಂದು ಅರಿತ ಮೃತರ ಸಂಬಂಧಿಗಳು ಶವಸಂಸ್ಕಾರ ಮಾಡಿ ಮನೆಗೆ ಹಿಂದುರುಗಿದ್ದಾರೆ. ಬಳಿಕ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.
ಗೌರಿಬಿದನೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರ ಎಡವಟ್ಟಿಗೆ ಕೊರೊನಾ ಲಕ್ಷಣಗಳಿದ್ರೂ ಸಕಾಲಕ್ಕೆ ವೃದ್ಧನಿಗೆ ಕೊರೊನಾ ಟೆಸ್ಟ್ ಮಾಡಿಸದೇ, ಸಾಮಾನ್ಯ ರೋಗಿಯಂತೆ ಉಪಚರಿಸಿದ್ದಾರೆನ್ನಲಾಗಿದೆ. ವೃದ್ಧ ಮೃತಪಟ್ಟು 5 ದಿನಗಳ ನಂತರ ಕೊರೊನಾ ಪಾಸಿಟಿವ್ ವರದಿ ಪಾಸಿಟಿವ್ ಬಂದಿದೆ. ವೃದ್ಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಗೆ ಆತಂಕ ಶುರುವಾಗಿದೆ.
ಕಳೆದ ಜೂನ್ 20 ರಂದು 80 ವರ್ಷದ ವೃದ್ಧನಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಜೂ. 22 ರಂದು ನಗರದ ಡಾ.ಶೇಷಗಿರಿರಾವ್ ಬಳಿ ಚಿಕಿತ್ಸೆ ಪಡೆದಿದ್ದ. ನಂತರ ಜೂ. 23 ರಂದು ಸಾಯಿರಾಂ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದು, ಜೂ. 25ರಂದು ವೃದ್ಧ ಮೃತಪಟ್ಟಿದ್ದು ಸಹಜ ಸಾವು ಎಂದು ಅರಿತ ಮೃತರ ಸಂಬಂಧಿಗಳು ಶವಸಂಸ್ಕಾರ ಮಾಡಿ ಮನೆಗೆ ಹಿಂದುರುಗಿದ್ದಾರೆ. ಬಳಿಕ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.