ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 41 ಕೊರೊನಾ ಸೋಂಕಿತರು ಪತ್ತೆಯಾಗಿದ್ದು 70 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮತ್ತೆ 41 ಕೊರೊನಾ ಕೇಸ್ ಪತ್ತೆ: ಸೋಂಕಿತರ ಸಂಖ್ಯೆ 8,753 ಕ್ಕೆ ಏರಿಕೆ - Corona
ಚಿಕ್ಕಬಳ್ಳಾಪುರ ನಗರದಲ್ಲಿ 23, ಬಾಗೇಪಲ್ಲಿ 7, ಚಿಂತಾಮಣಿ 14 ,ಗೌರಿಬಿದನೂರು 14, ಗುಡಿಬಂಡೆ 4, ಶಿಡ್ಲಘಟ್ಟ 8 ಮಂದಿ ಸಂಪೂರ್ಣವಾಗಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮತ್ತೆ 41 ಕೊರೊನಾ ಕೇಸ್ ಪತ್ತೆ
ಮೂವರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ 2, ಬಾಗೇಪಲ್ಲಿ 1, ಚಿಂತಾಮಣಿ 3, ಗೌರಿಬಿದನೂರು 19, ಗುಡಿಬಂಡೆ 8, ಶಿಡ್ಲಘಟ್ಟ 8 ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,753 ಕ್ಕೆ ಏರಿಕೆಯಾಗಿದೆ.
ಗೌರಿಬಿದನೂರು ಮೂಲದ 52 ವರ್ಷದ ಪುರುಷ, ಚಿಂತಾಮಣಿ ಮೂಲದ 40 ವರ್ಷದ ಮಹಿಳೆ ಹಾಗೂ ಗುಡಿಬಂಡೆ ಮೂಲದ 50 ವರ್ಷ ಪುರುಷ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 96 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 7,509 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.