ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಆಟೋ ಮೇಲೆ ಪಲ್ಟಿಯಾಗಿ ಎಣ್ಣೆ ಮಣ್ಣುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ- ಗೌರಿಬಿದನೂರು ಮಾರ್ಗದ ವೀರ ದಿಮ್ಮಮ್ಮನ ಕಣಿವೆ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿ... 12 ಸಾವಿರ ಲೀಟರ್ ಎಣ್ಣೆ ಮಣ್ಣುಪಾಲು - 12 ಸಾವಿರ ಲೀಟರ್ ಎಣ್ಣೆ ರಸ್ತೆ ಪಾಲು
ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಆಟೋ ಮೇಲೆ ಪಲ್ಟಿಯಾಗಿ ಎಣ್ಣೆ ಮಣ್ಣುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಆಟೋ ನುಜ್ಜುಗುಜ್ಜಾಗಿದ್ದು ಟ್ಯಾಂಕರ್ನಲ್ಲಿದ್ದ ಸುಮಾರು ಹನ್ನೆರಡು ಸಾವಿರ ಲೀಟರ್ ಅಡುಗೆ ಎಣ್ಣೆ ಮಣ್ಣುಪಾಲಾಗಿದೆ.
ಅಪಘಾತದಲ್ಲಿ ಆಟೋ ನುಜ್ಜುಗುಜ್ಜಾಗಿದ್ದು ಟ್ಯಾಂಕರ್ನಲ್ಲಿದ್ದ ಸುಮಾರು ಹನ್ನೆರಡು ಸಾವಿರ ಲೀಟರ್ ಅಡುಗೆ ಎಣ್ಣೆ ಮಣ್ಣುಪಾಲಾಗಿದೆ. ಆಟೋ, ಟ್ಯಾಂಕರ್ಅನ್ನು ಹಿಂದಿಕ್ಕಲು ಹೋಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಆಟೋದಲ್ಲಿದ್ದ ಐವರು ಮತ್ತು ಟ್ಯಾಂಕರ್ನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿ, ಕಿಲೋ ಮೀಟರ್ಗಟ್ಟಲೆ ವಾಹನಗಳು ನಿಂತಿದ್ದವು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಟ್ಯಾಂಕರ್ ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.