ಕರ್ನಾಟಕ

karnataka

ETV Bharat / state

ವಿಧುರಾಶ್ವತ್ಥದಲ್ಲಿ ಕಾಂಗ್ರೆಸ್ ರಣಕಹಳೆ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ - ಚಿಕ್ಕಬಳ್ಳಾಪುರ

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಚಿಕ್ಕಬಳ್ಳಾಪುರ‌ದ ಗೌರಿಬಿದನೂರಿನಿಂದ ವಿಧುರಾಶ್ವತ್ಥದವರೆಗೆ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿತ್ತು.

Congress padayatra in Chikkaballapur
ಕಾಂಗ್ರೆಸ್ ಪಾದಯಾತ್ರೆ

By

Published : Aug 12, 2022, 9:41 AM IST

ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಸ್ಥಳ ಗೌರಿಬಿದನೂರಿನ‌ ಅಲಕಾಪುರದಿಂದ ವಿಧುರಾಶ್ವತ್ಥದವರೆಗೂ ಬೃಹತ್ ಪಾದಯಾತ್ರೆ ನಡೆಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸಿದರು. ಈ ವೇಳೆ, ಮಾತನಾಡಿದ ಡಿಕೆಶಿ ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದ್ದು, ಈ ಬಾರಿ ಐದೂ ಕ್ಷೇತ್ರಗಳನ್ನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನಿಸಿಕೊಂಡಿರುವ ವಿಧುರಾಶ್ವತ್ಥದಲ್ಲಿ 32 ಜನ ಸ್ವಾತಂತ್ರ್ಯ ಹೋರಾಟಗಾರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದಾರೆ'. ಬಿಜೆಪಿಯವರು, ಆರ್​​ಎಸ್​​ಎಸ್ ನವರು ಯಾರಾದರೂ ಈ ದೇಶಕ್ಕೆ ಪ್ರಾಣಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಆರ್​​ಎಸ್​​ಎಸ್​​ನಲ್ಲಿ ರಾಜಕೀಯ ಪಕ್ಷ ಇರಲಿಲ್ಲ. ಹೆಡೆಗೆವಾರ್ ಎಂಬ ಡಾಕ್ಟರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರೆಲ್ಲ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆರ್​​ಎಸ್​​ಎಸ್ ಸಂಘ ಪರಿವಾರದವರಿಗೆ ನಾಚಿಕೆ ಆಗಲ್ವಾ?, ಈ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು?. ಇಂದು ನಾನು ಮುಖ್ಯಮಂತ್ರಿಯಾಗಿದ್ದು, ಮೋದಿ ಮುಖ್ಯಮಂತ್ರಿಯಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ.

ಹರ್ ಘರ್​ ಗರ್ ತ್ರಿರಂಗಾ ಬಿಜೆಪಿಯವರ ಡ್ರಾಮಾ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು. ಗೌರಿಬಿದನೂರಿನಲ್ಲಿ ಶಿವಶಂಕರರೆಡ್ಡಿ ಐದು ಬಾರಿ ಗೆದ್ದಿದ್ದಾರೆ. ಬೇರೆವರು ಚೀಲಗಳಲ್ಲಿ ದುಡ್ಡು ತಗೊಂಡು ಬರ್ತಾರೆ ಎಚ್ವರಿಕೆ ಇರಲಿ. ಕಾರ್ಯಕರ್ತ ಶಿವಶಂಕರರೆಡ್ಡಿ ಅವರ ಜೊತೆ ನಿಲ್ಲಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:ಹರ್ ಘರ್ ತಿರಂಗ ಕೇವಲ ನಾಟಕ, ಲೂಟಿಯೇ ಬಿಜೆಪಿ ಕೊಡುಗೆ: ಸಿದ್ದರಾಮಯ್ಯ

ABOUT THE AUTHOR

...view details