ETV Bharat Karnataka

ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ತಲೆ ತಗ್ಗಿಸುವ ಕೆಲಸ ಮಾಡಿ ಪಾಪದ ಕೊಡ ತುಂಬಿಸಿಕೊಂಡಿದೆ: ಸಚಿವ ಸುಧಾಕರ್ - ಚಿಕ್ಕಬಳ್ಳಾಪುರ ಬಿಜೆಪಿ ಪಕ್ಷದ ಮುಖಂಡರ ಸಭೆ

ಗ್ರಾಪಂ ಚುನಾವಣೆ ಹಿನ್ನೆಲೆ ಕ್ಷೇತ್ರದ ಸಂಸದ ಹಾಗೂ ಮಾಜಿ ಶಾಸಕ ರಾಜಣ್ಣ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರ ಸಭೆ ನಡೆಸಿ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಸಚಿವ ಸುಧಾಕರ್ ಬ್ಯಾಟ್ ಬೀಸಿದರು.

ಸಚಿವ ಸುಧಾಕರ್
ಸಚಿವ ಸುಧಾಕರ್
author img

By

Published : Dec 18, 2020, 7:59 PM IST

ಚಿಕ್ಕಬಳ್ಳಾಪುರ:ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ವಿಧಾನ ಪರಿಷತ್​ನಲ್ಲಿ ಗಲಭೆ ಸೃಷ್ಟಿಸಿ ತಲೆ ತಗ್ಗಿಸುವಂತಹ ಕೆಲಸ ಮಾಡಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾಪಂ ಚುನಾವಣೆ ಹಿನ್ನೆಲೆ ಕ್ಷೇತ್ರದ ಸಂಸದ ಹಾಗೂ ಮಾಜಿ ಶಾಸಕ ರಾಜಣ್ಣ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರ ಸಭೆ ನಡೆಸಿ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಬ್ಯಾಟ್ ಬೀಸಿದರು.

ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸುಧಾಕರ್

ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ವಿಧಾನ ಪರಿಷತ್​ನಲ್ಲಿ ಉಪಸಭಾಪತಿಗಳನ್ನು ಎಳೆದಾಡಿ, ಗಲಭೆ ಸೃಷ್ಟಿಸಿದ ಕಾಂಗ್ರೆಸ್​ ಪಕ್ಷ ದೇಶದ ಜನರ ಟೀಕೆಗಳಿಗೆ ಗುರಿಯಾಗಿದೆ ಎಂದರು.

ಶಿಡ್ಲಘಟ್ಟದಲ್ಲಿ ಶಾಸಕರಿಲ್ಲವೆಂದು ತಿಳಿದುಕೊಳ್ಳಬೇಡಿ, ರಾಜಣ್ಣ ಶಾಸಕರಾಗುವವರೆಗೂ ಶಿಡ್ಲಘಟ್ಟ ತಾಲೂಕಿಗೂ ನಾನೇ ಶಾಸಕ ಎಂಬ ಹೇಳಿಕೆ ನೀಡುವುದರ ಮೂಲಕ ತಮ್ಮ ರಾಜಕೀಯ ಎದುರಾಳಿ ವಿ.ಮುನಿಯಪ್ಪರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.

ABOUT THE AUTHOR

...view details