ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಗಾಂಧಿ ಹೆಸರು ಹೇಳಿ ಜನತೆಗೆ ಟೋಪಿ ಹಾಕಿದೆ- ಕಟೀಲ್ - BJP state unit president Nalin Kumar Katil

75 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಗಾಂಧಿ ಹೆಸರು ಹೇಳಿಕೊಂಡು ಜನತೆಗೆ ಟೋಪಿ ಹಾಕಿ, ಅವರ ಕಾರ್ಯಕರ್ತರನ್ನು ಕಡೆಗಣಿಸಿದೆ..

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌

By

Published : Nov 29, 2020, 8:15 PM IST

ಚಿಕ್ಕಬಳ್ಳಾಪುರ(ಚಿಂತಾಮಣಿ):ದೇಶದಲ್ಲಿ ತುಷ್ಟೀಕರಣ ನೀತಿಯ ರಾಜಕಾರಣ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಅವನತಿ ಕಾಣುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅಡಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಕರೆ ನೀಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌

ಚಿಕ್ಕಬಳ್ಳಾಪುರ ನಗರ ಹಾಗೂ ಚಿಂತಾಮಣಿ ‌ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರ ಶ್ರಮ ರಾಜ್ಯಕ್ಕೆ ಮಾದರಿಯಾಗಬೇಕು.

75 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಗಾಂಧಿ ಹೆಸರು ಹೇಳಿಕೊಂಡು ಜನತೆಗೆ ಟೋಪಿ ಹಾಕಿ, ಅವರ ಕಾರ್ಯಕರ್ತರನ್ನು ಕಡೆಗಣಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕಂಡ ರಾಮ ರಾಜ್ಯ ಕನಸನ್ನು ನನಸು ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿಂದು 1,291 ಮಂದಿಗೆ ಕೊರೊನಾ : 15 ಜನರ ಸಾವು

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಜಿಲ್ಲೆಯ 228 ಗ್ರಾಮ ಪಂಚಾಯತ್‌ನಲ್ಲಿ 148 ಸ್ಥಾನ ಹೊಂದಿರುವ ಬಿಜೆಪಿ ಶೇ.90ರಷ್ಟು ಗೆಲುವು ಸಾಧಿಸಬೇಕು. ರಾಜ್ಯದಲ್ಲಿ ಶೇ.80ರಷ್ಟು ಗೆಲುವಿಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ABOUT THE AUTHOR

...view details