ಚಿಕ್ಕಬಳ್ಳಾಪುರ : ಪಂಚರತ್ನ ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ, ಹಾಗೂ ಜನರನ್ನು ಕರೆ ತರಲು ಬಾಡಿಗೆಗೆ ತಂದಿದ್ದ ವಾಹನಕ್ಕೆ ಹಣ ನೀಡದ ಕಾರಣ ಬಾಗೇಪಲ್ಲಿ ಜೆಡಿಎಸ್ ತಾಲೂಕು ಕಚೇರಿಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ಜಿಲ್ಲೆಯಲ್ಲಿ ಪಂಚರತ್ನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಚೇಳೂರಿನಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆ ಬಾಗೇಪಲ್ಲಿ ನಗರವನ್ನು ಸುತ್ತಿಕೊಂಡು ಗುಡಿಬಂಡೆ ವ್ಯಾಪ್ತಿಯ ಬೀಚಗಾನಹಳ್ಳಿ ಗ್ರಾಮದಲ್ಲಿ ಸಮಾವೇಶ ಹಾಗೂ ಗ್ರಾಮ ವಾಸ್ತವ್ಯ ನಡೆದಿತ್ತು.