ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಪಟ್ಟಣದ ಕಾಲೇಜು ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರು ಇದನ್ನು ಕೊಲೆ ಎಂದು ಶಂಕಿಸುತ್ತಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಸಿಂಗಪ್ಪಗಾರಿಪಲ್ಲಿ ಗ್ರಾಮದ ಸುರೇಶ್(19) ಎಂಬಾತ ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿದ್ದರು. ಈ ವಿದ್ಯಾರ್ಥಿಯು ಇಂದು ಪಟ್ಟಣಕ್ಕೆ ಸಮೀಪ ಕೂಡಿಕೊಂಡ ರಸ್ತೆಯಲ್ಲಿರುವ ಖಬರಸ್ತಾನ್ ಹಿಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆದರೆ ನೆಲದ ಮೇಲೆ ಕಾಲುಗಳನ್ನಿಟ್ಟುಕೊಂಡಿರುವ ವಿದ್ಯಾರ್ಥಿಯ ಮೊಣಕಾಲಿನ ಮೇಲೆ ಸುಟ್ಟ ಗಾಯಗಳು, ಹರಿತವಾದ ಆಯುಧದಲ್ಲಿ ಮಾಡಿರುವ ಗಾಯಗಳು ಮತ್ತು ನೇಣು ಹಾಕಿಕೊಂಡಿದ್ದರೂ, ನೆಲದ ಮೇಲೆಯೇ ಕಾಲುಗಳನ್ನು ಇಟ್ಟುಕೊಂಡಿರುವುದು ಅನುಮಾನಗಳಿಎಗ ಕಾರಣವಾಗಿದೆ.