ಕರ್ನಾಟಕ

karnataka

ETV Bharat / state

ಚಿಂತಾಮಣಿಯಲ್ಲಿ ಮುನಿಯಪ್ಪ ಪ್ರಚಾರ ಸಭೆ: ಮೋದಿ ಕಾಲೆಳೆದ ಸಿ.ಎಂ.ಇಬ್ರಾಹಿಂ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳನೇ ಬಾರೀ ಸಂಸದರಾದ ಕೆ.ಹೆಚ್.ಮುನಿಯಪ್ಪಗೆ ಸ್ವಪಕ್ಷದಿಂದಲೇ ಸೋಲಿನ ಖೆಡ್ಡ ತೋಡಲು ಸಿದ್ಧರಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಚಿಂತಾಮಣಿ ಹಾಗೂ ಶಿಡ್ಲಘಟ್ಟ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಮುನಿಯಪ್ಪ ಚಿಂತಾಮಣಿ ನಗರದಲ್ಲಿ ಪ್ರಚಾರ ಶುರು ಮಾಡಿದ್ದಾರೆ.

ಮೋದಿ ಕಾಲೆಳೆದ ಸಿಎಂ ಇಬ್ರಾಹಿಂ

By

Published : Apr 6, 2019, 8:03 PM IST

Updated : Apr 6, 2019, 11:32 PM IST

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಕೊಟ್ಟಿದೆ ಎಂದು ಮೋದಿ ಕೇಳಿದ್ದರು. ದೇಶಕ್ಕೆ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ, ನೆಹರು, ಇಂದಿರಾ ಗಾಂಧಿ, ವಲ್ಲಭಭಾಯ್​ ಪಟೇಲ್, ರಾಹುಲ್ ಗಾಂಧಿಯನ್ನು ಕೊಟ್ಟಿದೆ. ಆದರೆ ನರೇಂದ್ರ ಮೋದಿ ದೇಶಕ್ಕೆ ನೀರವ್ ಮೋದಿ, ವಿಜಯ್ ಮಲ್ಯ ಹಾಗೂ ಮತ್ತೆ ನರೇಂದ್ರ ಮೋದಿಯನ್ನೇ ಕೊಟ್ಟಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ಟೀಕಿಸಿದ್ದಾರೆ.

ಇಂದು ಚಿಂತಾಮಣಿ ನಗರದಲ್ಲಿ ಮುನಿಯಪ್ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ 5 ವರ್ಷದ ಆಡಳಿತದಲ್ಲಿ ಶೂನ್ಯ ಸಾಧನೆ ಮಾಡಿದ್ದಲ್ಲದೆ, ಭ್ರಷ್ಟಾಚಾರವನ್ನು ತಡೆಯಲು ವಿಫಲರಾಗಿದ್ದಾರೆ. ತ್ರೇತಾ ಯುಗದಲ್ಲಿ ರಾವಣ, ದ್ವಾಪರ ಯುಗದಲ್ಲಿ ದುರ್ಯೋಧನ, ಕಲಿಯುಗದಲ್ಲಿ ನರೇಂದ್ರ ಮೋದಿ. ಇವರು ದೇಶವನ್ನು ಸರ್ವನಾಶ ಮಾಡುವವರು. ಕಳೆದ‌ ಐದು ವರ್ಷದಲ್ಲಿ ಮೋದಿ ಸುತ್ತದ ದೇಶವಿಲ್ಲ. ನೋಟುಗಳನ್ನು ರದ್ದುಪಡಿಸಿ ಬಡವರಿಗೆ ತೊಂದರೆ ಮಾಡಿದರು. ಲಕ್ಷ ಲಕ್ಷ ಹಣವನ್ನು ಬಡವರಿಗೆ ಕೊಡುತ್ತೇನೆಂದು ಮೋಸ ಮಾಡಿದರು. ಚುನಾವಣೆಯ ಸಮಯದಲ್ಲಿ ರೈತರ ಖಾತೆಗೆ 2 ಸಾವಿರ ಹಾಕುತ್ತೇನೆಂದು ಸುಳ್ಳು ಭರವಸೆ ನೀಡಿದ್ದಾರೆ. ಇದು ಸುಳ್ಳಿನ ಭರವಸೆಯಷ್ಟೇ ಎಂದು ಕಿಡಿಕಾರಿದರು.

ಮೋದಿ ಕಾಲೆಳೆದ ಸಿಎಂ ಇಬ್ರಾಹಿಂ

ಸದ್ಯ ಬಿಸಿಲನ್ನು ಲೆಕ್ಕಿಸದೆ ಪ್ರಚಾರವನ್ನು ಶುರು ಮಾಡಿರುವ ಮುನಿಯಪ್ಪ, ನಗರದ ಅಲ್ಪಸಂಖ್ಯಾಂತರ ಮಂಟಪದಲ್ಲಿ ಸಭೆಯನ್ನು ಏರ್ಪಡಿಸಿ ಕೋಲಾರ ಕ್ಷೇತ್ರದಲ್ಲಿ ಮತ್ತೊಮ್ಮೆ ಸಂಸದರಾನ್ನಾಗಿಸಿ ಎಂದು ಮನವಿ ಮಾಡಿದ್ದಾರೆ.

7 ಬಾರಿ ಸಂಸದನಾಗಿ ಆಯ್ಕೆಯಾದ ನಂತರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ರೈಲ್ವೆ ಯೋಜನೆಗಳು, ರಸ್ತೆ ಅಭಿವೃದ್ಧಿ, ಕೈಗಾರಿಕಾ ಪ್ರದೇಶಗಳಿಂದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಮಾಡಲಾಗಿದೆ. ಈ ಬಾರಿಯೂ ನಿಮ್ಮ ಮತ ನೀಡಿ ಎಂದು ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಾಣಿ ಕೃಷ್ಣಾರೆಡ್ಡಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಭಾಗಿಯಾಗಿದ್ದರು.

Last Updated : Apr 6, 2019, 11:32 PM IST

ABOUT THE AUTHOR

...view details