ಚಿಕ್ಕಬಳ್ಳಾಪುರ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವುದಾಗಿ ನಂಬಿಸಿ, ನಕಲಿ ಟಿಕೆಟ್ ನೀಡಿ ವಂಚಿಸಿರುವ ಆರೋಪ ಚಿಕ್ಕಬಳ್ಳಾಪುರದಲ್ಲಿ ಕೇಳಿ ಬಂದಿದೆ.
ಆಂಧ್ರಮೂಲದ ವೆಸ್ಟ್ ಗೋದಾವರಿಯ ಪಂಜಾ ರಮಣ ಪ್ರಸಾದ್ ಎಂಬಾತ ಟ್ರಾವೆಲ್ ಏಜೆನ್ಸಿ ಮಾಲೀಕಿ ಪ್ರಿಯದರ್ಶಿನಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಆನ್ಲೈನ್ನಲ್ಲಿ ಪರಿಚಯವಾದ ರಮಣಪ್ರಸಾದ್ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ತಿಳಿಸಿದ್ದಾನೆ. ಒಟ್ಟು 143 ಜನರಿಗೆ 900 ರೂಪಾಯಿಗಳಂತೆ 1,28,700 ರೂಪಾಯಿಯನ್ನು ರಮಣ ಪ್ರಸಾದ್ಗೆ ಪ್ರಿಯದರ್ಶಿನಿ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರಿಗೆ 10 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪವೂ ಕೇಳಿಬಂದಿದೆ.