ಚಿಕ್ಕಬಳ್ಳಾಪುರ:ಮೂರು ತಿಂಗಳಿಂದ ವೇತನ ಸಿಗದ ಪೌರ ಕಾರ್ಮಿಕರು ಚಿಂತಾಮಣಿಯಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ವೇತನ ನೀಡುವಂತೆ ಆಗ್ರಸಿಹಿ ಪೌರಕಾರ್ಮಿಕರಿಂದ ಪ್ರತಿಭಟನೆ
ಕಳೆದ ಮೂರು ತಿಮಗಳಿಂದ ವೇತನ ಸಿಗದೆ ಪರದಾಡುತ್ತಿದ್ದ ಪೌರಕಾರ್ಮಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯ ನಗರವನ್ನು ಸ್ವಚ್ಛ ಗೊಳಿಸುವ ಪೌರಕಾರ್ಮಿಕರಿಗೆ ಕಳೆದ 3 ತಿಂಗಳಿಂದ ನಗರಸಭೆ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರು ಪರದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸೋಮವಾರದೊಳಗೆ ವೇತನ ನೀಡದಿದ್ದರೆ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಹೆಚ್ಚರಿಕೆ ನೀಡಿದ್ರು.
ಇದಕ್ಕೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತಾರು, ರೆವೆನ್ಯೂ ಸಮಸ್ಯೆಯಿಂದ ಖಜಾನೆಯಲ್ಲಿ ದುಡ್ಡು ಇಲ್ಲ. ಹಾಗಾಗಿ ಪೌರ ಕಾರ್ಮಿಕರಿಗೆ ವೇತನ ಕೊಡಲು ತಡವಾಗುತ್ತಿದೆ. ಈಗ ಒಂದು ತಿಂಗಳ ವೇತನ ನೀಡುತ್ತಿದ್ದು, ಆದಷ್ಟು ಬೇಗ ಎಲ್ಲಾ ತಿಂಗಳ ವೇತನ ಕೊಡಲಾಗುವುದೆಂದು ಭರವಸೆ ನೀಡಿದರು.