ಚಿಕ್ಕಬಳ್ಳಾಪುರ : ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿದ್ದು, ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕಳೆದ ಮೂರು ವರ್ಷಗಳಿಂದ 2,175 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್,ದು ಸುಮಾರು 686 ಸವಾರರು ಸಾವನ್ನಪ್ಪಿ, 708 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಸ್ಪಿ ಅಭಿನವ್ ಖರೆ ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷಕ್ಕೆ 2,175 ರಸ್ತೆ ಅಪಘಾತ ಪ್ರಕರಣ ದಾಖಲು: ಎಸ್ಪಿ - ಚಿಕ್ಕಬಳ್ಳಾಪುರ ರಸ್ತೆ ಅಪಘಾತ ವಿವಿರ
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ 2,175 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸುಮಾರು 686 ಸವಾರರು ಸಾವನ್ನಪ್ಪಿ, 708 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಸ್ಪಿ ಅಭಿನವ್ ಖರೆ ಮಾಹಿತಿ ನೀಡಿದರು.
ಅಪಘಾತ ವಲಯಗಳಲ್ಲಿ 6 ಹೈವೇ ಪ್ಯಾಟ್ರೋಲ್ ವಾಹನಗಳು ಕೆಲಸವನ್ನು ನಿರ್ವಹಿಸುತ್ತಿದ್ದು, ಈ ವರ್ಷದಲ್ಲಿ 3 ವಾಹನಗಳು ಜಿಲ್ಲೆಗೆ ಬರಲಿದ್ದು. ಇದರಿಂದ ಅಪಘಾತಗಳನ್ನು ತಡೆಗಟ್ಟಲು ಸಹಾಕಾರಿಯಾಗಲಿದೆ ಎಂದುಅಭಿನವ್ ಖರೆಸ್ಪಷ್ಟಪಡಿಸಿದ್ದಾರೆ. ಇನ್ನು ಪೋಕ್ಸೋ ಕಾಯ್ದೆಯಡಿ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಕಷ್ಟು ಯೋಜನೆಗಳನ್ನು ತರಲಾಗುವುದು ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ 2,175 ಪ್ರಕರಣಗಳ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ದರ್ಗಾಗೆ ತೆರಳುತ್ತಿರುವ 11 ಪ್ರಯಾಣಿಕರು ತೆರಳುತ್ತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಗೆ ಕಪ್ಪುಚುಕ್ಕಿಯಾಗಿದೆ ಎಂದರು.