ಚಿಕ್ಕಬಳ್ಳಾಪುರ :ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರಲ್ಲಿಅನರ್ಹ ಶಾಸಕ ಸುಧಾಕರ್ ಕೂಡ ಒಬ್ಬರು. ಇವರ ರಾಜೀನಾಮೆಯಿಂದ ತೆರವಾದಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಮತದಾರರ ನಿಷ್ಠೆ ಪಕ್ಷಕ್ಕೋ ಅಥವಾ ನಾಯಕನಿಗೋ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಸದ್ಯ ಅನರ್ಹ ಶಾಸಕ ಸುಧಾಕರ್ ಅವರು ಬಿಜೆಪಿ ಸೇರ್ಪಡೆಗೊಂಡಿದ್ದು, ಉಪಚುನಾವಣೆಯಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅಖಾಡವಾಗಿತ್ತು. ಪ್ರಸ್ತುತ ರಾಜಕೀಯ ಲೆಕ್ಕಚಾರಗಳು ಏರುಪೇರಾಗಿದ್ದು, ಈ ಹಿಂದಿನಂತಹ ಫಲಿತಾಂಶ ಮತ್ತೆ ಕಾಣಿಸುವುದಿಲ್ಲ.
ಕಾಂಗ್ರೆಸ್ನಿಂದ ನಂದಿ ಆಂಜನಪ್ಪ ಹಾಗೂ ಜೆಡಿಎಸ್ನಿಂದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಸ್ಪರ್ಧಿಸುತ್ತಿದ್ದರೇ ಬಿಜೆಪಿಯಿಂದ ಅನರ್ಹ ಶಾಸಕ ಸುಧಾಕರ್, ಬಿಎಸ್ಪಿಯಿಂದ ನಾರಾಯಣ ಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ. ಈ ಉಪಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲ್ಲಿದ್ದಾಳೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.