ಕರ್ನಾಟಕ

karnataka

ETV Bharat / state

ಲಾಕ್ ಡೌನ್ ಆದರೂ ಚಿಂತಾಮಣಿ ನಗರದ ಜನತೆ ಡೋಂಟ್ ಕೇರ್! - ಮಾರುಕಟ್ಟೆಗಳಿಗೆ ನುಗ್ಗಿ ಬೀಳುತ್ತಿರುವ ಜನ

ದೇಶಾದ್ಯಂತ ಲಾಕ್​ಡೌನ್ ಆಗಿದ್ದರೂ ಚಿಂತಾಮಣಿಯ ಜನತೆ ಇದನ್ನು ಲೆಕ್ಕಿಸುತ್ತಿಲ್ಲ. ಮಾರುಕಟ್ಟೆಗಳಿಗೆ ಜನ ಮುಗಿಬೀಳುತ್ತಿರುವ ದೃಶ್ಯಗಳು ಇಲ್ಲಿ ಕಾಣುತ್ತಿವೆ.

Market
Market

By

Published : Mar 30, 2020, 1:25 PM IST

ಚಿಕ್ಕಬಳ್ಳಾಪುರ:ಕೊರೊನಾ ವೈರಸ್ ಹರಡದಂತೆ ಜನತಾ ಕರ್ಫ್ಯೂ, ಲಾಕ್ ಡೌನ್, 144 ಸೆಕ್ಷನ್ ಜಾರಿಯಾಗಿದ್ದರೂ ಕೂಡಾ ಇವುಗಳನ್ನು ಯಾವುದೇ ಲೆಕ್ಕಿಸದೆ ಮಾರುಕಟ್ಟೆಗಳಿಗೆ ನುಗ್ಗಿ ಬೀಳುತ್ತಿರುವ ದೃಶ್ಯಗಳು ಕಂಡು ಬಂದ ಘಟನೆ ಜಿಲ್ಲೆಯ ಚಿಂತಾಮಣಿ‌ ನಗರದಲ್ಲಿ‌ ಕಂಡು ಬಂದಿದೆ.

ದಿನ ನಿತ್ಯ ಬಳಕೆಯ ವಸ್ತುಗಳಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಸರ್ಕಾರ ಮುಂಜಾನೆ 06:00ರಿಂದ 11:00 ಗಂಟೆವರೆಗೂ ತರಕಾರಿ, ಹೂ, ಹಣ್ಣು ಸೇರಿದಂತೆ ದಿನಸಿ ಪದಾರ್ಥಗಳನ್ನು ಕೊಂಡುಕೊಳ್ಳಲು ಮಾನ್ಯತೆ ನೀಡಿತ್ತು.

ಮಾರುಕಟ್ಟೆಯಲ್ಲಿ ಜನ ಜಂಗುಳಿ

ಅದರಲ್ಲಿಯೂ ವಾರ್ಡ್​ಗಳಲ್ಲಿ ಕೆಲ ಅಂಗಡಿಗಳಿಗೆ ಮೀಸಲು ಮಾಡಿ ಆ ಅಂಗಡಿಗಳ ಮುಂದೆ ವ್ಯಾಪಾರ ಮಾಡುವಾಗ ಅಂತರವನ್ನು ಕಾಯ್ದುಕೊಳ್ಳಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಕೂಡ ದಂಡಾಧಿಕಾರಿಗಳ ಹಾಗೂ ಆರಕ್ಷಕರ ಆದೇಶಗಳನ್ನು ಲೆಕ್ಕಿಸದೇ ದಿನಸಿ ಅಂಗಡಿಗಳ ಮುಂದೆ ಜನ ಜಂಗುಳಿ ಕಾಣಿಸುತ್ತಿದ್ದವು.

ಇಲ್ಲಿನ ಹಲವಾರು ದಿನಸಿ ಅಂಗಡಿಗಳಲ್ಲಿ ದುಬಾರಿ ಬೆಲೆಯಲ್ಲಿ ಅಗತ್ಯ ವಸ್ತುಗಳು ಮಾರಾಟ ಮಾಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details