ಚಿಂತಾಮಣಿ:ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕಿಯರು ಮತ್ತು ಇತರ ಸಿಬ್ಬಂದಿಯನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ, ಅವರಿಗೆ 7.40 ಲಕ್ಷ ರೂಪಾಯಿ ಸಂಬಳ ವಿತರಿಸಿದರು. ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿಗೆ ಮೂರು ತಿಂಗಳ ವೇತನ ನೀಡುವುದಾಗಿ ಶಾಸಕರು ಈ ಹಿಂದೆಯೇ ಹೇಳಿದ್ದರು.
ಶಾಸಕರು, 7 ಜನ ವೈದ್ಯರನ್ನು ಒಳಗೊಂಡಂತೆ ಒಟ್ಟು 35 ಮಂದಿಗೆ ಮೂರು ತಿಂಗಳ ವೇತನ 7.40 ಲಕ್ಷ ರೂ. ನೀಡಿದರು. ನಾಲ್ಕನೇ ತಿಂಗಳ ವೇತನ ಕೊಡಲು ಸಿದ್ದನಿರುವುದಾಗಿ ತಿಳಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಸೋಂಕಿತರನ್ನು ರಕ್ತ ಸಂಬಂಧಿಗಳೇ ಹತ್ತಿರ ಸೇರಿಸಿಕೊಳ್ಳದ ಸಂದರ್ಭದಲ್ಲಿ, ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಅವರ ಆರೈಕೆ ಮಾಡುತ್ತಿದ್ದಾರೆ.