ಕರ್ನಾಟಕ

karnataka

ETV Bharat / state

ಬಾಲ್ಯ ವಿವಾಹ: ಪೋಷಕರ ವಿರುದ್ಧ ದೂರು ನೀಡಿದ ಅಪ್ರಾಪ್ತ ಬಾಲಕಿ - minor girl complaint against her parents

ಬಾಗೇಪಲ್ಲಿ ಪಟ್ಟಣದ ಜಬಿವಲ್ಲಾ (22) ಎಂಬಾತನೊಂದಿಗೆ ಅಪ್ರಾಪ್ತ ಬಾಲಕಿಯ ವಿವಾಹ ನೆರವೇರಿತ್ತು. ಇದರಿಂದ ನೊಂದ ಬಾಲಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರ ಮುಂದೆ ನೋವು ತೋಡಿಕೊಂಡು ಪೋಷಕರ ವಿರುದ್ಧ ವಿಚಾರಣೆ ನಡೆಸುವಂತೆ ದೂರು ನೀಡಿದ್ದಳು.

Chikkaballapur
ಪೋಷಕರ ವಿರುದ್ಧ ದೂರು ನೀಡಿದ ಅಪ್ರಾಪ್ತ ಬಾಲಕಿ

By

Published : Mar 14, 2021, 9:10 AM IST

ಬಾಗೇಪಲ್ಲಿ:ಅಪ್ರಾಪ್ತ ಮಗಳನ್ನು ವಿವಾಹ ಮಾಡಿಸಿದ್ದ ಪೋಷಕರು ಹಾಗೂ ಮದುವೆ ಮಾಡಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಹುಡುಗ ಈ ಇಬ್ಬರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಗೇಪಲ್ಲಿ ಪಟ್ಟಣದ ಜಬಿವಲ್ಲಾ (22) ಎಂಬಾತನೊಂದಿಗೆ ಅಪ್ರಾಪ್ತ ಬಾಲಕಿಯ ವಿವಾಹ ನೆರವೇರಿತ್ತು. ಇದರಿಂದ ನೊಂದ ಬಾಲಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರ ಮುಂದೆ ನೋವು ತೋಡಿಕೊಂಡು ಪೋಷಕರ ವಿರುದ್ಧ ವಿಚಾರಣೆ ನಡೆಸುವಂತೆ ದೂರು ನೀಡಿದ್ದಳು. ವಿಚಾರಣೆ ನಡೆಸಿದಾಗ ಬಾಲ್ಯವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ.

ಬಾಲಕಿಯ ಹೇಳಿಕೆ ಆಧರಿಸಿ ಪಟ್ಟಣದ ಪೊಲೀಸರು ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details