ಚಿಕ್ಕಬಳ್ಳಾಪುರ: ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಪಟ್ಟಣದ ಬೆಟ್ಟದ ದಾರಿ ಗಂಗಾಧರ ಎಂಬುವವರ ಮನೆಯಲ್ಲಿ ಇಂದು ಕಾರ್ಯಕ್ರಮವಿರುವ ಕಾರಣ ಮನೆಯವರು ಸೇರಿ ಅಡುಗೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಹೊತ್ತಿಕೊಂಡು ಆತಂಕ ಸೃಷ್ಟಿಯಾಯಿತು. ಸಣ್ಣದಾಗಿ ಸ್ಫೋಟಗೊಂಡಿದೆ.
ಮುಗಿಯುವ ಹಂತಕ್ಕೆ ಬಂದಿತ್ತು: ಸಿಲಿಂಡರ್ ಸ್ಫೋಟಗೊಂಡರೂ ಯಾವುದೇ ಅಪಾಯ ಸಂಭವಿಸಲಿಲ್ಲ. ಗ್ಯಾಸ್ ಮುಗಿಯುತ್ತಾ ಬಂದಿದ್ದರಿಂದ ಅಪಾಯ ತಪ್ಪಿದೆ ಎನ್ನಲಾಗಿದೆ.
ಇನ್ನು ಮನೆಯಲ್ಲಿ ಇರುವ ವಸ್ತುಗಳಿಗೆ ಹಾನಿಯಾಗಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದು ಬಂದಿದೆ.