ಕರ್ನಾಟಕ

karnataka

ETV Bharat / state

ತಿಂದಮೇಲೆ ದುಡ್ಡು ಕೊಡತೀವಿ ಅಂದಿದ್ದೆ ತಪ್ಪಾ...ಚಾಕು ತೋರಿಸಿ ಒದೆ ತಿಂದ ಪಾನಿಪೂರಿ ವಾಲಾ - ಪಾನಿಪುರಿ ಯುವಕನಿಗೆ ಸಾರ್ವಜನಿಕರಿಂದ ಥಳಿತ

ಪಾನಿಪುರಿ ತಿನ್ನಲೆಂದು ಬಂದವರಿಗೆ ಬೆದರಿಕೆ ಹಾಕಿದ ಪಾನಿಪುರ ಯುವಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ‌ ನಡೆದಿದೆ.

panipuri boy
ಯುವಕ

By

Published : Jan 3, 2020, 9:50 PM IST

Updated : Jan 3, 2020, 11:46 PM IST

ಚಿಕ್ಕಬಳ್ಳಾಪುರ:ಪಾನಿಪೂರಿ ತಿಂದಮೇಲೆ ದುಡ್ಡು ಕೊಡ್ತೀವಿ ಎಂದ ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಪಾನಿಪೂರಿ ಮಾರುವ ಯುವಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ‌ ನಡೆದಿದೆ.

ಪಾನಿಪೂರಿ ವಾಲಾ

ನಗರದ ಶನಿಮಾಹಾತ್ಮ ದೇವಾಲಯಕ್ಕೆ ಬಂದಿದ ಕುಟುಂಬವೊಂದು ದರ್ಶನವನ್ನು ಮುಗಿಸಿಕೊಂಡು ಪಾನಿಪೂರಿ ತಿನ್ನಲೆಂದು ಬಂದಾಗ ಪಾನಿಪುರಿ ಮಾರುವ ಯುವಕ ಮೊದಲು ದುಡ್ಡು ಕೊಡಿ ನಂತರ ತಿನ್ನಿ ಎಂದು ಆಕ್ರೋಶವಾಗಿ ಹೇಳಿದ್ದಾನೆ. ಆದರೆ ಗ್ರಾಹಕರು ತಿಂದ ನಂತರ ದುಡ್ಡು ಕೊಡುವುದಾಗಿ ಹೇಳಿದ್ದಾಗ ಕೈಯಲ್ಲಿದ್ದ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಈ ವೇಳೆ ಪಕ್ಕದಲ್ಲೇ ಇದ್ದ ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಬಂದಿದ್ದ ಭಕ್ತಾಧಿಗಳು ಯುವಕನಿಗೆ ಧರ್ಮದೇಟು ನೀಡಿ ಬುದ್ದಿ ಕಲಿಸಿದ್ದಾರೆ.

ಇನ್ನೂ ವ್ಯಾಪಾರದ ಸಲುವಾಗಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಸಣ್ಣಪುಟ್ಟ ಅಂಗಡಿಗಳ್ನು ತೆರೆದು ಈ ರೀತಿ ನಡೆದುಕೊಳ್ಳುವವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಹೆಚ್ಚು ಗಮನಹರಿಸಿ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Last Updated : Jan 3, 2020, 11:46 PM IST

ABOUT THE AUTHOR

...view details